ತಿರುವನಂತಪುರಂ: ಖ್ಯಾತ ನಟ ಜಗದೀಶ್ ಅವರ ಪತ್ನಿ ಪಿ.ರೆಮಾ (61) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ಮೆಡಿಸಿನ್ ವಿಭಾಗದ ಮಾಜಿ ಮುಖ್ಯಸ್ಥೆ ರೆಮಾ ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಸ್ವಯಂ ನಿವೃತ್ತಿ ಪಡೆದಿದ್ದರು. ಫೋರೆನ್ಸಿಕ್ ತಜ್ಞರಾಗಿ, ಡಾ. ಪಿ ರೆಮಾ ಅವರು ಕೇರಳದ ಹಲವಾರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೊಡಗಿದ್ದರು. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ
Advertisement
Advertisement
ಪ್ರಮುಖ ನಟನ ಪತ್ನಿಯಾಗಿರುವ ರೆಮಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಸಾಮಾಜಿಕ ಜಾಲತಾಣದ ಚಾನೆಲ್‍ವೊಂದರಲ್ಲಿ ಜಗದೀಶ್ ಅವರೊಂದಿಗಿನ ಹಿಂದಿನ ಸಂದರ್ಶನದಲ್ಲಿ, ಅವರು ನಾನು ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ತೆರೆದುಕೊಂಡಿದ್ದರು. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
Advertisement
ರೆಮಾ ಅವರ ಪುತ್ರಿ ರಮ್ಯಾ ಜಗದೀಶ್ ನಾಗರಕೋಯಿಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದು, ಮತ್ತೋರ್ವ ಪುತ್ರಿ ಸೌಮ್ಯ ಜಗದೀಶ್ ಮನೋವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ನರೇಂದ್ರನ್ ನಯ್ಯರ್ ಐಪಿಎಸ್ ಮತ್ತು ಡಾ. ಪ್ರವೀಣ್ ಪಣಿಕ್ಕರ್ ಇಬ್ಬರೂ ರೆಮಾ ಅವರ ಅಳಿಯಂದಿರಾಗಿದ್ದಾರೆ.
Advertisement
ಕಾಮಿಡಿಯಲ್ಲಿ ಅಪ್ರತಿಮ ಒಲವು ಹೊಂದಿದ್ದ ನಟ ಜಗದೀಶ್ ಅವರು ‘ಮುತಾರಂಕುನ್ನು ಪಿಒ, ‘ಮಜ ಪೆಯ್ಯುನ್ನು ಮದ್ದಳೆ ಕೊಡುನ್ನು, ‘ಇನ್ ಹರಿಹರನಗರ’, ‘ಗಾಡ್‍ಫಾದರ್’, ಹೀಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪಾದ ಮತ್ತು ದಿ ಪ್ರೀಸ್ಟ್ ಸೇರಿದಂತೆ ಇತ್ತೀಚಿನ ಕೆಲವು ಮಲಯಾಳಂ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಅವರು ತಮ್ಮ ಪತಿ-ನಟ ಜಗದೀಶ್ ಮತ್ತು ಇಬ್ಬರು ಪುತ್ರಿಯರಾದ ರಮ್ಯಾ ಮತ್ತು ಸೌಮ್ಯ ಅವರನ್ನು ಅಗಲಿದ್ದಾರೆ. ಪಿ ರೆಮಾ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ತೈಕಾಡ್ ಶಾಂತಿ ಕವಚದಲ್ಲಿ ನಡೆಯಲಿದೆ.