ಕ್ರಚಸ್ ಹಿಡಿದು ಆತಂಕ ಮೂಡಿಸಿದ ನಟ ಹೃತಿಕ್

Public TV
1 Min Read
hrithik roshan

ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಕ್ರಚಸ್ ಸಹಾಯದಿಂದ ನಡೆದಾಡುತ್ತಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಊರುಗೋಲು ಮತ್ತು ವ್ಹೀಲ್ ಚೇರ್ ಸಹಾಯದಿಂದ ನಡೆದಾಡುವುದು ಅಸಹಾಯಕತೆ ಅಲ್ಲ ಎನ್ನುವ ಪಾಠವನ್ನೂ ಅವರು ಮಾಡಿದ್ದಾರೆ.

hrithik roshan

ಏಕಾಏಕಿ ಹೃತಿಕ್ ಕ್ರಚಸ್ (Crutches) ಹಿಡಿದಿರುವುದಕ್ಕೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಫೈಟರ್  ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟನಿಗೆ ಏನಾಗಿದೆ ಎನ್ನುವ ಪ್ರಶ್ನೆಯೂ ಮೂಡಿದೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ಕುರಿತು ಹೃತಿಕ್ ಹೇಳಿಕೊಂಡಿದ್ದಾರೆ.

 

ಶೂಟಿಂಗ್ ನಡೆಯುವಾಗ ಹೃತಿಕ್ ಅವರಿಗೆ ಪೆಟ್ಟಾಗಿರುವ ಕುರಿತು ಈ ಹಿಂದೆ ವರದಿಯಾಗಿತ್ತು. ಅದಕ್ಕಾಗಿ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆಯ ಭಾಗವಾಗಿ ಕ್ರಚಸ್ ಸಹಾಯದಿಂದ ಅವರು ನಡೆಯುತ್ತಿದ್ದಾರೆ. ಆ ವಿಶೇಷ ಅನುಭವನ್ನೂ ಹಂಚಿಕೊಂಡಿದ್ದಾರೆ.

Share This Article