ಹೃತಿಕ್ ರೋಷನ್ ನಟನೆಯ ‘ಕ್ರಿಶ್ 4’ ಸಿನಿಮಾ ಯಾವಾಗ? ಸಿಕ್ತು ಅಪ್‌ಡೇಟ್

Public TV
1 Min Read
krrish 4

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಸದ್ಯ ‘ವಾರ್ 2’ (War 2) ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ‘ಕ್ರಿಶ್ 4’ ಸಿನಿಮಾ ಯಾವಾಗ ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕ್ರಿಶ್ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಆಕ್ಸಿಡೆಂಟ್ ನಂತರ ಮತ್ತೆ ನಟನೆಗೆ ‘ವಜ್ರಕಾಯ’ ಬೆಡಗಿ ಕಮ್‌ಬ್ಯಾಕ್

hrithik roshan 2

ಕ್ರಿಶ್ ಸರಣಿ ಸಿನಿಮಾಗಳು ಈಗಾಗಲೇ ಸಿನಿಮಾ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಇದರ ಸೀಕ್ವೆಲ್ ಯಾವಾಗ ಎಂದು ಕಾಯುತ್ತಿದ್ದವರಿಗೆ ‘ಕ್ರಿಶ್ 4’ (Krrish 4) ಬಗ್ಗೆ ಹೃತಿಕ್ ತಂದೆ ರಾಕೇಶ್ ರೋಷನ್ ಮಾಹಿತಿ ನೀಡಿದ್ದಾರೆ. 2025ರಿಂದ ಕ್ರಿಶ್ 4 ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಕಥೆ ಸಿದ್ಧತೆ ಮಾಡೋದ್ರರಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಜನರ ನಿರೀಕ್ಷೆ ಚಿತ್ರದ ಮೇಲಿರೋದ್ರಿಂದ ಉತ್ತಮ ಕಥೆಯೊಂದಿಗೆ ಬರಲು ರಾಕೇಶ್ ರೋಷನ್ ಯೋಚಿಸಿದ್ದಾರೆ. ಕಥೆ ಮತ್ತು ನಟ, ನಟಿಯರು ಫೈನಲ್ ಆಗುತ್ತಿದ್ದಂತೆ ಮುಂದಿನ ವರ್ಷ ‘ಕ್ರಿಶ್ 4’ ಶೂಟಿಂಗ್ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.

ಸದ್ಯ ಹೃತಿಕ್ ರೋಷನ್ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ. ಹಾಗಾಗಿ ಕ್ರಿಶ್ 4 ಚಿತ್ರಕ್ಕೆ ಚಾಲನೆ ಸಿಗುವುದು ಕೂಡ ತಡವಾಗುತ್ತಿದೆ. ಆದರೆ ಪ್ರೇಕ್ಷಕರ ನಿರೀಕ್ಷೆಯನ್ನು ಮಾತ್ರ ಹುಸಿ ಮಾಡಲ್ಲ ಅಂತಿದ್ದಾರೆ ರಾಕೇಶ್ ರೋಷನ್.

Share This Article