ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಸದ್ದಿಲ್ಲದೇ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ. ಈಗ ರಾಜಾಹುಲಿಯ ಕುಚುಕು ಗೆಳೆಯ ನಟ ಹರ್ಷವರ್ಧನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರಾಜಾಹುಲಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್ ಮಾಡೆಲ್ ಐಶ್ವರ್ಯ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಭಾನುವಾರ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿದೆ.
Advertisement
Advertisement
ಹರ್ಷವರ್ಧನ್ `ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಮೊಗ್ಗಿನ ಮನಸ್ಸು ಸಿನಿಮಾ ನಂತರ, ರಾಜಹುಲಿ, ಗಜಪಡೆ ಹೀಗೇ ಕೆಲವು ಸಿನಿಮಾಗಳಲ್ಲಿ ಹರ್ಷವರ್ಧನ್ ಅಭಿನಯಿಸಿದ್ದಾರೆ.
Advertisement
ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಜೊತೆ `ಪವರ್’ ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಆದರೆ ಯಶ್ ಅಭಿನಯದ `ರಾಜಾಹುಲಿ’ ಸಿನಿಮಾದಲ್ಲಿ ಹರ್ಷವರ್ಧನ ಯಶ್ ಸ್ನೇಹಿತನಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
Advertisement
ಇತ್ತೀಚೆಗೆ ‘ರಘುವೀರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಹರ್ಷ ಅವರು ಅಭಿನಯಿಸಿದ್ದಾರೆ.