ಕಿರುತೆರೆಯ ಜನಪ್ರಿಯ ನಟ ಗುರುಚರಣ್ ಸಿಂಗ್ (Gurcharan Singh) ಏಪ್ರಿಲ್ 22ರಿಂದ ನಾಪತ್ತೆಯಾಗಿದ್ದರು (Missing). ಚಿತ್ರೀಕರಣಕ್ಕಾಗಿ ಮುಂಬೈಗೆ ಹೋಗುವುದಾಗಿ ದೆಹಲಿ ಮನೆಯಿಂದ ಹೊರಟಿದ್ದ ಗುರುಚರಣ್, ಆನಂತರ ನಾಟ್ ರಿಚೇಬಲ್ ಆಗಿದ್ದರು. ಹಾಗಾಗಿ ಕುಟುಂಬಸ್ಥರು ಪೊಲೀಸರಿಗೆ (Police) ಮೊರೆ ಹೋಗಿದ್ದರು. ಗುರುಚರಣ್ ನಾಪತ್ತೆಯಾಗಿ ಎರಡು ವಾರ ಕಳೆದರೂ, ಇನ್ನೂ ಪತ್ತೆಯಾಗಿಲ್ಲ. ಸಹಜವಾಗಿಯೇ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ತಂಡಗಳನ್ನು ರಚಿಸಿ, ನಟನೆ ಹುಡುಕಾಟ ಆರಂಭಿಸಿದ್ದರು. ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಏಪ್ರಿಲ್ 22ರಂದು ರಾತ್ರಿ 9.14ಕ್ಕೆ ದೆಹಲಿಯ ಪಾಲಂ ಪ್ರದೇಶದ ಪರುಶುರಾಮ್ ಚೌಕ್ ನಲ್ಲಿ ನಟ ಸಿಂಗ್ ತಮ್ಮ ಬೆನ್ನಿನ ಮೇಲೆ ಬ್ಯಾಗ್ ನೇತಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟರಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ಪೋರ್ಟ್ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ (Harjit Singh) ದೂರು ದಾಖಲಿಸಿದ್ದಾರೆ. ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.