ಮುಂಬೈ: ಬಾಲಿವುಡ್ ನಟ ಗೋವಿಂದ ತಮ್ಮ ಮಗಳ ಮುಂದೆ ಮರು ಮದುವೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಇತ್ತೀಚೆಗೆ ಗೋವಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಗೋವಿಂದ ತುಂಬಾನೇ ಎಂಜಾಯ್ ಮಾಡಿದ್ದು, ಇದೇ ವೇಳೆ ಅವರು ಮಗಳ ಮುಂದೆಯೇ ಮರು ಮದುವೆ ಆಗಿದ್ದಾರೆ.
ಗೋವಿಂದ, ಮಗಳು ಟೀನಾ ಅಹುಜಾ ನಟಿಸಿರುವ ಹಾಡೊಂದು ಬಿಡುಗಡೆ ಆಗಿದೆ. ಈ ಹಾಡನ್ನು ಗಜೇಂದ್ರ ವರ್ಮಾ ಅವರು ಹಾಡಿದ್ದು, ಟೀನಾ ಅವರ ಜೊತೆ ಆನ್‍ಸ್ಕ್ರೀನ್‍ನಲ್ಲೂ ಕಾಣಿಸಿಕೊಂಡಿದ್ದಾರೆ. ಗೋವಿಂದ ತಮ್ಮ ಮಗಳ ಹಾಡನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.
ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಗಜೇಂದ್ರ ವರ್ಮಾ, ಟೀನಾ ಜೊತೆ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಕೂಡ ಭಾಗವಹಿಸಿದ್ದರು. ಈ ನಡುವೆ ಗೋವಿಂದ ತಮ್ಮ ಪತ್ನಿ ಸುನೀತಾ ಹಣೆಗೆ ಕುಂಕುಮ ಹಚ್ಚುವ ಮೂಲಕ ಮತ್ತೊಮ್ಮೆ ಮದುವೆ ಆಗಿದ್ದು, ಈ ಫೋಟೋಗಳು ವೈರಲ್ ಆಗುತ್ತಿದೆ.
ಗೋವಿಂದ, ಸುನೀತಾ ಹಣೆಗೆ ಕುಂಕುಮ ಹಚ್ಚಿದಲ್ಲದೆ ಅವರ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೋವಿಂದ ಕೆಂಪು ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಅಲ್ಲದೆ ಅವರ ಪತ್ನಿ ಕೂಡ ಕೆಂಪು- ಗೋಲ್ಡನ್ ಕಲರ್ ಸಲ್ವಾರ್ ಧರಿಸಿದ್ದರು.