ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕುಟುಂಬಕ್ಕೆ ವಿನೋದ್ ರಾಜ್ ಭೇಟಿ ನೀಡಿದ ಬೆನ್ನಲ್ಲೇ ನಟ ಗಣೇಶ್ ರಾವ್ ಕೂಡ ಭೇಟಿ ಕೊಟ್ಟಿದ್ದರು. ದರ್ಶನ್ ಪರವಾಗಿ ಮಾತನಾಡಲು ರೇಣುಕಾಸ್ವಾಮಿ ಮನೆಗೆ ಹೋಗಿದ್ರು ಎಂದು ಟೀಕೆಗಳು ವ್ಯಕ್ತವಾದ ಹಿನ್ನೆಲೆ ಗಣೇಶ್ ರಾವ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ (Darshan) ಪರ ವಹಿಸಿ ಎಲ್ಲೂ ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್
Advertisement
ರೇಣುಕಾಸ್ವಾಮಿ ಕುಟುಂಬ ಹೀನಾಯ ಪರಿಸ್ಥಿತಿಯಲ್ಲಿದೆ. ಮಾನವೀಯತೆ ದೃಷ್ಟಿಯಿಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದೆವು. ಈಗ ಚರ್ಚಿಸಿ ದ್ವೇಷ ಸಾಧಿಸುವ ಶಕ್ತಿ ಅವರ ಕುಟುಂಬಕ್ಕೆ ಇಲ್ಲ. ಯಾವುದೇ ಮುಲಾಜಿಗೆ ಒಳಗಾಗದೇ ಕರ್ನಾಟಕ ಪೊಲೀಸ್ ನಿಷ್ಠೆ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೇಳೋಕೆ ಭೇಟಿ ನೀಡಿದೆವು. ದರ್ಶನ್ ಪರ ವಹಿಸಿಕೊಂಡು ಮಾತನಾಡಿಲ್ಲ ಎಂದು ಟೀಕೆಗಳಿಗೆ ಗಣೇಶ್ ರಾವ್ (Ganesh Rao) ಕ್ಲ್ಯಾರಿಟಿ ನೀಡಿದ್ದಾರೆ.
Advertisement
Advertisement
ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದೆ ಅಷ್ಟೇ. ಆ ಕೃತ್ಯ ದರ್ಶನ್ ಮಾಡಿರಲ್ಲ ಅಂತ ಹೇಳಿದೆ. ದರ್ಶನ್ ಮಾಡಿಯೇ ಇಲ್ಲ ಅಂತ ಎಲ್ಲೂ ಸಮರ್ಥಿಸಿಕೊಂಡಿಲ್ಲ. ರೇಣುಕಾಸ್ವಾಮಿ ಮೇಲಿನ ಕೃತ್ಯವನ್ನು ಬೆಂಬಲಿಸಿ ಮಾತನಾಡಲಿಲ್ಲ ಎಂದಿದ್ದಾರೆ. ಇದೆಲ್ಲಾ ಕೆಟ್ಟ ಸಮಯದಲ್ಲಿ ಆಗೋಗಿದೆ ಎಂದಿದ್ದಾರೆ. ಈ ಘಟನೆಯಿಂದ ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಏನೋ ಗೊತ್ತಿಲ್ಲ. ಶೂಟಿಂಗ್ ನಡೆಯುತ್ತಲೇ ಇದೆ. ಅದು ಯಾವುದು ನಿಲ್ಲೋದಿಲ್ಲ. ಈ ಘಟನೆ ಸಮಾಜದ ಮೇಲೆಯೂ ತುಂಬಾ ಪರಿಣಾಮ ಬೀರುತ್ತದೆ ಎಂದು ಗಣೇಶ್ ರಾವ್ ಮಾತನಾಡಿದ್ದಾರೆ.
Advertisement
ರೇಣುಕಾಸ್ವಾಮಿ ಕಡೆಯಿಂದ ಕೂಡ ಏನೋ ಹೆಚ್ಚು ಕಮ್ಮಿ ಆಗಿದೆ ಅಂತಾ ಕೇಳಿ ಬಂದಿದೆ. ಆದರೆ ದರ್ಶನ್ ಮತ್ತು ಅವರ ತಂಡ ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದಿತ್ತು. ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆ ಆಗಲಿ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಗಳು ಆದ್ರೂ ಜೈಲಿಗೆ ಹೋಗಿ ಬಂದವರು ಇದ್ದಾರೆ. ಅದಕ್ಕಾಗಿ ನ್ಯಾಯಾಲಯ ಇದೆ. ಅವರು ತೀರ್ಮಾನ ಮಾಡುತ್ತಾರೆ. ಇನ್ನೂ ರೇಣುಕಾಸ್ವಾಮಿ ಫೋಟೋಗೆ ಹೂ ಹಾಕಿದ್ದೇ ತಪ್ಪು ಅನ್ನೋ ಹಾಗೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸಾವಿನ ಮನೇಲಿ ಕುಳಿತು ದರ್ಶನ್ ಪರ ಮಾತಾಡಿದರು ಎಂದು ಹೇಳಲು ಶುರು ಮಾಡಿದ್ರು ಎಂದು ಗಣೇಶ್ ರಾವ್ ಹೇಳಿದ್ದಾರೆ.