ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೇ ಗಣೇಶ್ ತನ್ನ ಹೆಂಡತಿ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಗಣೇಶ್ ನಿವಾಸದ ಮುಂದೆ ರಾತ್ರಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್, ನಮ್ಮ ಬರ್ತ್ ಡೇಯನ್ನು ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ರೀತಿ ಆಚರಣೆ ಮಾಡುತ್ತಾರೆ. ಅವರಿಗೆ ನಮ್ಮ ಇಡೀ ಕುಟುಂಬ ಚಿರುಋಣಿ. ಅಭಿಮಾನಿಗಳ ಪ್ರೀತಿ, ಆಶೀರ್ವಾದಿಂದ ನಾವು ಈ ಮಟ್ಟಕ್ಕೆ ಬೆಳೆದಿರುವುದು. ಆದ್ದರಿಂದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
Advertisement
ಈ ವೇಳೆ ಪತ್ನಿ ಶಿಲ್ಪಾ ಅವರು ಏನು ಗಿಫ್ಟ್ ಕೊಟ್ಟರು ಎಂದು ಕೇಳಿದಾಗ, ಗಂಡ-ಹೆಂಡತಿ ಮಧ್ಯೆ ಏನು ಗಿಫ್ಟ್ ಅಂತ ಏನು ಇರಲ್ಲ. ವರ್ಷಕ್ಕೆ ಏನಾದರೂ ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತೇವೆ. ಅದನ್ನು ಹುಟ್ಟುಹಬ್ಬದ ದಿನದಂದೇ ತೆಗೆದುಕೊಳ್ಳುತ್ತೇವೆ. ಬಳಿಕ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ನನ್ನ ಹೆಂಡತಿ ಎಂದು ಶಿಲ್ಪಾರಿಗೆ ತಮಾಷೆ ಮಾಡಿದರು.
Advertisement
Advertisement
ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ನನ್ನ ಮಗಳ ಬಲವಂತಕ್ಕೆ ಒಂದು ಹಾರರ್ ಸಿನಿಮಾ ಮಾಡುತ್ತಿದ್ದೇನೆ. ನಿರ್ದೇಶಕ ನಾಗಣ್ಣ ಅವರ ಜೊತೆ ಮಾಡುತ್ತಿರುವುದು ಸಂತಸವಾಗಿದೆ. ನಮ್ಮ ಹೋಮ್ ಪ್ರೊಡೆಕ್ಷನ್ ನಲ್ಲಿ `ಗೀತಾ’ ಸಿನಿಮಾ ಮಾಡುತ್ತಿದ್ದೇನೆ. ಕೊನೆಯಲ್ಲಿ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
Advertisement
ಹೋಮ್ ಬ್ಯಾನರ್ಸ್ ಅಡಿಯಲ್ಲಿ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.