ಮಂಗಳೂರು: ಉಳ್ಳಾಲ ತಾಲೂಕಿನ ಕಲ್ಲಾಪು ಬಳಿಯ ಬುರ್ದುಗೋಳಿ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ (Duniya Vijay) ಭೇಟಿ ನೀಡಿದ್ದಾರೆ.
ಗುಳಿಗ-ಕೊರಗಜ್ಜ (Koragajja) ಉಧ್ಬವ ಶಿಲೆಯ ಆದಿಸ್ಥಳವಾದ ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ಬುರ್ದುಗೋಳಿ ಸಾನಿಧ್ಯದ ದೈವಗಳಿಗೆ ನಟ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ
ಈ ಸಂದರ್ಭ ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್‌ಗೆ ಪ್ರಸಾದ ನೀಡಿ ಸನ್ಮಾನಿಸಲಾಗಿದೆ. ‘ಭೀಮಾ’ ಸಿನಿಮಾದ ಯಶಸ್ಸಿನ ಬಳಿಕ ತನ್ನ 29ನೇ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿರುವ ದುನಿಯಾ ವಿಜಯ್, ಚಿತ್ರೀಕರಣದ ಮಧ್ಯೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ