ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

Public TV
1 Min Read
KEERTHIGOWDA copy

ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

duniya vijay 1

ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.

KEERTHI

ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=H0T715sdeFM

Share This Article
Leave a Comment

Leave a Reply

Your email address will not be published. Required fields are marked *