ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ದುನಿಯಾ ವಿಜಯ್ ನನ್ನು ಬಂಧಿಸಿದ್ದು, ಆದ್ರೆ ಭಾನುವಾರವಾದ್ದರಿಂದ ಕೋರ್ಟ್ ಗೆ ರಜೆ ಹಿನ್ನೆಲೆಯಲ್ಲಿ ದುನಿಯಾ ವಿಜಿಗೆ ಜೈಲೂಟ ಗ್ಯಾರಂಟಿಯಾಗಿದೆ.
ಕೋರ್ಟ್ ಗೆ ರಜೆ ಇರುವ ಕಾರಣ ವಿಜಯ್ ಇಂದು ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಕಡಿಮೆ ಇದ್ದು, ಹೈಗ್ರೌಂಡ್ ಪೊಲೀಸರು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಅವರ ಮುಂದೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಕಲಾಪ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಬೇಲ್ ಸಿಗುವ ಸಾಧ್ಯತೆ ಕಡಿಮೆ ಇದೆ.
Advertisement
ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506, (ಕಿಡ್ನಾಪ್, ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಾಗಿದೆ.
Advertisement
Advertisement
ಪಾನಿಪುರಿ ಕಿಟ್ಟಿ ಹೇಳಿದ್ದೇನು?
ಅಂಬೇಡ್ಕರ್ ನಗರದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಏಕಾಏಕಿ ಹಲ್ಲೆ ಮಾಡಿದ್ದಾರೆ. ತಪ್ಪು ಮಾಡಿದರೆ ಅವರ ಮನೆಗೆ ಬಂದು ಹೇಳಬೇಕು. ಅದು ಬಿಟ್ಟು ಏಕಾಏಕಿ ಹಲ್ಲೆ ಮಾಡಿದ್ದಾರೆ. ನನಗೂ ದುನಿಯಾ ವಿಜಯ್ ಅವರಿಗೂ ಜಗಳವಾಗಿಲ್ಲ. ಜಿಮ್ ಟ್ರೇನ್ ಪ್ರಸಾದ್ ನಾನು ಬಿಸಿನೆಸ್ ಪಾಟ್ನರ್ ಆಗಿದ್ದೆವು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಅವನೇ ನನ್ನ ಮಗನನ್ನು ಅಪಹರಣ ಮಾಡಿ ಹಲ್ಲೆ ಮಾಡಿದ್ದಾನೆ ಅಂತ ಕಿಟ್ಟಿ ಹೇಳಿದ್ದಾರೆ.
Advertisement
ಬಂಧನದ ಭೀತಿಯಲ್ಲಿ ವಿಜಯ್, ಮಾರುತಿಗೆ ಗೌಡ ಅವರಿಗೆ ಜೀವ ಬೆದರಿಕೆ ಹಾಕಿ ವಿಡಿಯೋ ಮಾಡಿಸಿದ್ದಾರೆ. ವಿಡಿಯೋದಲ್ಲಿ ‘ಗಲಾಟೆ ನಡೆಯುತ್ತಿತ್ತು, ಈ ವೇಳೆ ದುನಿಯಾ ವಿಜಿ ಬಂದು ಬಿಡಿಸಿ ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ ಎಂದು ಮಾರುತಿ ಗೌಡ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾನಿಪುರಿ ಕಿಟ್ಟಿ, ಮಾರುತಿಗೆ ಹಲ್ಲೆ ಮಾಡಿ ಸುಳ್ಳು ವಿಡಿಯೋ ಮಾಡಿಸಿದ್ದಾರೆ. ಜೀವ ಬೆದರಿಕೆ ಇತ್ತು. ಆದ್ದರಿಂದ ಹೆದರಿ ಈ ವೀಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv