ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರು ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಮೂಲಕ ಮಾಲಿವುಡ್ ಚಿತ್ರಕ್ಕೆ ನಟ ಮರಳಿದ್ದಾರೆ. ಇದನ್ನೂ ಓದಿ:ಮಾಸ್ ಅವತಾರ ತಾಳಿದ ಸಲ್ಮಾನ್ ಖಾನ್- ’ಸಿಕಂದರ್’ ಟೀಸರ್ ಮೆಚ್ಚಿದ ಫ್ಯಾನ್ಸ್
ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸೋ ಅದ್ಭುತ ಕಲಾವಿದ. ಹಾಗಾಗಿ ಬಹುಭಾಷೆಗಳಲ್ಲಿ ದುಲ್ಕರ್‌ಗೆ ಬೇಡಿಕೆಯಿದೆ. ನಹಾಸ್ ಹಿದಾಯತ್ ಜೊತೆ ಹೊಸ ಮಲಯಾಳಂ ಸಿನಿಮಾಗಾಗಿ ದುಲ್ಕರ್ ಕೈಜೋಡಿಸಿದ್ದಾರೆ. ನಟನ 40ನೇ ಚಿತ್ರ ಇದಾಗಿದೆ. ಮಾರ್ಚ್ 1ರ ಸಂಜೆ 5 ಗಂಟೆಗೆ ಸಿನಿಮಾದ ಟೈಟಲ್ ಅನಾವರಣ ಆಗಲಿದೆ.
View this post on Instagram
ಇನ್ನೂ ‘ಕಿಂಗ್ ಆಫ್ ಕೋಥಾ’ ಚಿತ್ರವು 2023ರಲ್ಲಿ ತೆರೆಕಂಡಿತ್ತು. ಆ ನಂತರ ತೆಲುಗು, ತಮಿಳಿನಲ್ಲಿ ನಟ ಬ್ಯುಸಿಯಾದರು. ಮಲಯಾಳಂ ನಟನಾಗಿರೋ ದುಲ್ಕರ್ ಇದೀಗ ಮತ್ತೆ ಮಾಲಿವುಡ್ ಚಿತ್ರ ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಅಂತ್ಯದಲ್ಲಿ ತೆರೆಕಂಡ ‘ಲಕ್ಕಿ ಭಾಸ್ಕರ್’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ತೆಲುಗು, ತಮಿಳಿನಲ್ಲಿ ನಟನಿಗೆ ಕೈತುಂಬಾ ಸಿನಿಮಾಗಳಿವೆ.