ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಗೆ ಇಂದು ಗೃಹಪ್ರವೇಶ. ಜಯನಗರದಲ್ಲಿ ನಿರ್ಮಾಣವಾಗಿರುವ ಆ ಭವ್ಯ ಮನೆಯಲ್ಲಿ ಹಳೆಯ ನೆನಪುಗಳನ್ನೇ ಉಳಿಸಿಕೊಂಡು ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್. ಸಿಂಹ ನೆಲೆಸಿದ್ದ ಆ ಮನೆಯನ್ನು ಅವರ ಕುಟುಂಬ ಇದೀಗ ಹೊಸ ರೀತಿಯಲ್ಲಿ ಕಟ್ಟಿಸಲಾಗಿದೆ.
Advertisement
ನವ ಗೃಹಕ್ಕೆ ಪ್ರವೇಶಿಸುವುದು ಹಲವರ ಕನಸು. ಇಂದು ಚಂದನವನದ ಮೇರುನಟ ದಿ. ವಿಷ್ಣುವರ್ಧನ್ ಅವರ ಕುಟುಂಬ ಇಂತಹದ್ದೇ ಸಂತಸದಲ್ಲಿದೆ. ಈ ಶುಭ ದಿನದಂದು ವಿಷ್ಣು ಅವರ ನೂತನ ನಿವಾಸದ ಗೃಹಪ್ರವೇಶಕ್ಕೆ ಸಜ್ಜಾಗಿದ್ದು, ವಿಷ್ಣು ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
Advertisement
Advertisement
ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ, ಗೇಟ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂತಹ ಮನೆಗೆ ಇಂದು ವಿಷ್ಣು ಕುಟುಂಬ ಗೃಹ ಪ್ರವೇಶ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
Advertisement
ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಆದರೆ, ಇದು ನಮ್ಮ ಜಾಗ ಅಂತ ಅದರ ಮಾಲಿಕರು ಆಗ ಬಂದಿದ್ದರು. ವಿಷ್ಣುವರ್ಧನ್ ಇದನ್ನು ಇಷ್ಟ ಪಟ್ಟಿದ್ದಾರೆ ಅಂತ ಆ ಜಾಗದಲ್ಲಿ ಅರ್ಧ ಜಾಗ ಹಾಗೆಯೇ ಕೊಟ್ಟಿದ್ದರಂತೆ ಮಾಲೀಕರು. 6 ಬೆಡ್ ರೂಂನ ಈ ಮನೆ ಮುಂಭಾಗ ಒಂದು ಕೃಷ್ಣನ ವಿಗ್ರಹವಿದೆ. ಅದನ್ನ ವಿಷ್ಣು ಅವ್ರೆ ಇಲ್ಲಿ ಸ್ಥಾಪಿಸಿದ್ದರಂತೆ. ಅದನ್ನ ಹಾಗೆಯೆ ಇಟ್ಟು ಕಲ್ಲಿನ ಮಂಟಪ ಮಾಡಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ.