– ಡಾಲಿ ನೋಡಲು ಮುಗಿಬಿದ್ದ ಫ್ಯಾನ್ಸ್
ರಾಯಚೂರು: ಮದುವೆ ಅನೌನ್ಸ್ ಮಾಡಿದ ಬಳಿಕ ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ಡಾಲಿ ಧನಂಜಯ್, ರಾಯರ ದರ್ಶನ ಪಡೆದರು.
ಬಳಿಕ ನಗರದ ಸ್ಟೇಷನ್ ರಸ್ತೆ ಬಳಿ ಖಾಸಗಿ ಮಾಲ್ ಉದ್ಘಾಟನೆಗೆ ಬಂದಿದ್ದ ಡಾಲಿ ಧನಂಜಯ್ ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು. ಕಾಲ್ತುಳಿತವಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿ ಜನರನ್ನ ಚದುರಿಸಿದ್ದಾರೆ.
ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳಿಗೆ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿದ್ದಾರೆ. ಇನ್ನೂ ಈ ವೇಳೆ ನಟ ಡಾಲಿ ಧನಂಜಯ್ ಕೂಲಿಂಗ್ ಗ್ಲಾಸ್ ಕಿತ್ತಿಕೊಳ್ಳಲು ಅಭಿಮಾನಿಯೊಬ್ಬ ಯತ್ನಿಸಿದ ಘಟನೆ ನಡೆದಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರನ್ನೂ ಬಿಡದೆ ಅಭಿಮಾನಿಗಳು ತಳ್ಳಾಟ ನಡೆಸಿದರು.
ವಿದ್ಯಾರ್ಥಿನಿಯರು ಕಾಲೇಜು ಕಟ್ಟಡದ ಟೆರೇಸ್ ಏರಿ ಡಾಲಿ ಧನಂಜಯ್ ನೋಡಲು ಹರಸಾಹಸ ಪಟ್ಟರು. ವಿದ್ಯಾರ್ಥಿನಿಯರನ್ನ ಕೆಳಗಿಳಿಸಲು ಉಪನ್ಯಾಸಕರು ಕೋಲು ಹಿಡಿದು ಬರಬೇಕಾಯಿತು.
ರಾಯಚೂರಿನಲ್ಲಿ ಮಾತನಾಡಿದ ನಟ, ಉತ್ತರ ಕರ್ನಾಟಕ ಜನ ತೋರಿಸುವ ಪ್ರೀತಿ ರಫ್ ಆ್ಯಂಡ್ ಟಫ್ ಆದ್ರೂ ಅಗಾಧವಾದದ್ದು. ಖುಷಿಯಾಗುತ್ತೆ ರಾಯಚೂರಿಗೆ ಮತ್ತೆ ಮತ್ತೆ ಬರುತ್ತೇನೆ ಎಂದರು. ಝಿಬ್ರಾ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಎಲ್ಲರೂ ನೋಡಿ ಎಂದು ತಿಳಿಸಿದರು.
ಜನ ಸಿಕ್ಕಸಿಕ್ಕಲಿ ಮದುವೆ ಯಾವಾಗ ಅಂತ ಕೇಳ್ತಿದ್ರು. ಅದಕ್ಕೆ ಅನೌನ್ಸ್ ಮಾಡಿದ್ದೀನಿ ಎಲ್ಲರನ್ನೂ ಕರಿತೀನಿ. ಎಲ್ಲರೂ ಮದುವೆಗೆ ಬರಬೇಕು ಎಂದರು.