ಮೈಸೂರು: ಚಾಮುಂಡಿ ಬೆಟ್ಟಕ್ಕೆ (Chamundi Hill) ನಟ ಡಾಲಿ ಧನಂಜಯ್ (Dolly Dhananjay) ಹಾಗೂ ಭಾವಿ ಪತ್ನಿ ಡಾ. ಧನ್ಯತಾ ಭಾನುವಾರ ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಡಾಲಿ ಧನಂಜಯ್ ಮದುವೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರ ಜೊತೆ ಭಾವಿ ಪತ್ನಿ ಡಾ. ಧನ್ಯತಾ ಕೂಡ ಇದ್ದರು. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ
Advertisement
Advertisement
ದೇವರ ದರ್ಶನದ ಬಳಿಕ ಮಾತನಾಡಿದ ಡಾಲಿ, ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಲಗ್ನ ಪತ್ರಿಕೆ ಕೊಡುವುದನ್ನು ಶುರು ಮಾಡಿದ್ದೇನೆ. ಹಿರಿಯರಿಗೆ ಈಗಾಗಲೇ ಲಗ್ನ ಪತ್ರಿಕೆ ಕೊಡಲು ಶುರು ಮಾಡಿದ್ದೇನೆ. ಇಂದು ಚಾಮುಂಡಿ ಬೆಟ್ಟದಲ್ಲಿ ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿದ್ದೇನೆ. ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ. ಎಲ್ಲರೂ ಬಂದು ಆಶೀರ್ವಾದ ಮಾಡಿ. ಎಲ್ಲರಿಗೂ ಲಗ್ನ ಪತ್ರಿಕೆ ಕೊಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಮೈಸೂರಿನಲ್ಲಿ 2025ರ ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ. ಆಕ್ಟರ್ & ಡಾಕ್ಟರ್ ಮದುವೆ ಬಂದು ಆಶೀರ್ವಾದ ಮಾಡಿ ಅಂತ ಡಾಲಿ ಎಲ್ಲರನ್ನೂ ಇನ್‌ವೈಟ್ ಮಾಡಿದ್ದಾರೆ. ತುಂಬಾ ವಿಭಿನ್ನವಾಗಿ ಅಂಚೆ ಪತ್ರಿಕೆ ರೀತಿ ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಕೈಬರಹದ ಮೂಲಕ ಮದುವೆ ಕರೆಯೋಲೆ ಸಿದ್ಧಪಡಿಸಿದ್ದು ವಿಶೇಷವಾಗಿದೆ.