ಬೆಂಗಳೂರು: ಶೂಟಿಂಗ್ ವೇಳೆ ಅಸ್ವಸ್ಥರಾಗಿ ವಿಜಯಪುರದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ನಟ ದೊಡ್ಡಣ್ಣ ಈಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸುಗುಣಾ ಆಸ್ಪತ್ರೆ ದಾಖಲಾಗಿದ್ದಾರೆ.
ಡಿ ಹೈಡ್ರೇಷನ್‍ನಿಂದ ಬಳಲುತ್ತಿದ್ದ ದೊಡ್ಡಣ್ಣನವರಿಗೆ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ದೊಡ್ಡಣ್ಣ ಅವರನ್ನು ವಿಶೇಷ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ.
Advertisement
ದೊಡ್ಡಣ್ಣ ಆಪ್ತರಾದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಲಹೆಯ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಮಧ್ಯಾಹ್ನ ದೊಡ್ಡಣ್ಣ ದಾಖಲಾಗಿದ್ದಾರೆ. ಕುಟುಂಬ ವೈದ್ಯರಾದ ವೈಎ ಸುರೇಶ್ ದೊಡ್ಡಣ್ಣ ಅವರಿಗೆ ಚಿಕಿತ್ಸೆ ಚಿಕಿತ್ಸೆ ನೀಡುತ್ತಿದ್ದಾರೆ.
Advertisement
ಬಳ ದಿನಗಳಿಂದ ಲೋ ಬಿಪಿ, ಮಧುಮೇಹದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬಿಸಿಲಿನಲ್ಲಿ ವಿಜಯಪುರದ ಭಾರೀ ಬಿಸಿಲಿನಲ್ಲಿ ಚಿತ್ರೀಕರಣ ಮಾಡುವ ವೇಳೆ ಅಸ್ವಸ್ಥರಾಗಿದ್ದಾರೆ ಎಂದು ಸುಗುಣ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್ ನಾರಾಯಣ್ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಆಸ್ಪತ್ರೆಗೆ ಭೇಟಿ ನೀಡಿ ದೊಡ್ಡಣ್ಣ ಆರೋಗ್ಯ ವಿಚಾರಿಸಿದ್ದಾರೆ.
Advertisement
ವೈದ್ಯರಾಗಿರುವ ರೇಖಾ ಮಾತನಾಡಿ, ಕಾಲು ಊತಗೊಂಡಿದೆ. ಹಿಂದೆಯೂ ಕೂಡ ಇದೇ ರೀತಿ ಆಗಿತ್ತು. ಸದ್ಯ ದೊಡ್ಡಣ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ತಿಳಿಸಿದರು.
Advertisement
ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮಾತನಾಡಿ, ಕನ್ನಡದ ರಾಮಾ ರಾಮಾ ರೇ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ದೊಡ್ಡಣ್ಣ ದೊಡ್ಡ ಪಾತ್ರ ಮಾಡುತ್ತಿದ್ದಾರೆ. ಬಿಸಿಲು ಜಾಸ್ತಿ ಮತ್ತು ಪ್ರಯಾಣದಿಂದಾಗಿ ಅಸ್ವಸ್ಥರಾಗಿದ್ದರು. ಈಗ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.
ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯ ಕುರಿತು ಮಾತನಾಡಿದ ರಾಕ್‍ಲೈನ್ ವೆಂಕಟೇಶ್, ಈಗಷ್ಟೇ ಅಮ್ಮ ಆರೋಗ್ಯವಾಗಿದ್ದಾರೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ನಾನು ಅವರ ಹತ್ತಿರ ಮಾತನಾಡಿದ್ದೇನೆ ಎಂದರು.
ತೆಲುಗು ಚಿತ್ರದ ಶೂಟಿಂಗ್ ನಡೆಸಲು ಬುಧವಾರ ದೊಡ್ಡಣ್ಣ ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸಿದ್ದರು. ವಿಜಯಪುರದಿಂದ 40 ಕಿ.ಮೀ ದೂರದ ಸೋಲ್ಹಾಪುರ ರಸ್ತೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಅಸ್ವಸ್ಥಗೊಂಡಿದ್ದ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.