ತಿರುವನಂತಪುರಂ: ಮಾಲಿವುಡ್ ಖ್ಯಾತ ನಟ ದಿಲೀಪ್ ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸತತ ಮೂರನೇ ದಿನವೂ ವಿಚಾರಣೆ ಮುಂದುವರಿದಿದೆ.
2017ರಲ್ಲಿ ನಟಿ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ಕೊಲೆ ಸಂಚು ಮಾಡಿರುವ ಆರೋಪ ದಿಲೀಪ್ ಅವರ ಮೇಲೆ ಬಂದಿದೆ. ಪರಿಣಾಮ ಮೂರು ದಿನಗಳಿಂದ ದಿಲೀಪ್ ಅವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದು, ಇಂದು ಸಹ ನಟ ಕೇರಳ ಪೊಲೀಸರ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!
Advertisement
Advertisement
ಕಳೆದ ಎರಡು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ದಿಲೀಪ್ ಮತ್ತು ಇತರ ನಾಲ್ವರು ಆರೋಪಿಗಳನ್ನು 22 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸದಂತೆ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಶನಿವಾರ ಹೈಕೋರ್ಟ್, ಈ ಕೇಸ್ ವಿಚಾರಣೆ ನಡೆಸಿ ಜನವರಿ 23, 24, 25ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿತ್ತು. ಅಲ್ಲದೆ ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ಮೂಂದೂಡಿದ್ದು, ಅಲ್ಲಿಯವರೆಗೆ ದಿಲೀಪ್ ಅವರನ್ನು ಬಂಧಿಸದಂತೆ ಆದೇಶಿಸಿತ್ತು.
Advertisement
ತನಿಖಾಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಕ್ರೈಂ ಬ್ರಾಂಚ್ ಜನವರಿ 9 ರಂದು ದಿಲೀಪ್ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಪ್ರಸ್ತುತ ಇವರ ವಿರುದ್ಧ ಐಪಿಸಿ ಸೆಕ್ಷನ್ 116, 118, 120 ಬಿ, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು
ಏನಿದು ಪ್ರಕರಣ?: ದಿಲೀಪ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದನ್ನು ಆಧರಿಸಿ ಕೆಲದಿನಗಳ ಹಿಂದೆ ದಿಲೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಆಡಿಯೋದಲ್ಲಿ ತನಿಖಾಧಿಕಾರಿಗಳ ಮೇಲೆ ಕೊಲೆ ಮಾಡಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು, ಆಡಿಯೋ ವೈರಲ್ ಆಗಿತ್ತು. ಪರಿಣಾಮ ಕೇರಳ ಪೊಲೀಸ್ ತಂಡವು ದಿಲೀಪ್ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಕೂಡ ನಡೆಸಿತ್ತು. ಬಳಿಕ ಕೇಸ್ ದಾಖಲಿಸಿಕೊಂಡು ದಿಲೀಪ್ ಬಂಧಿಸಲು ತಯಾರಿ ನಡೆಸಿತ್ತು.