ಬೆಂಗಳೂರು: ದೂದ್ ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ನಡುವೆ ಪ್ರೀತಿ-ಪ್ರೇಮ ಇದೆ ಅನ್ನೋ ವಿಷಯ ಹಳೇದು. ಆದ್ರೆ ಹೊಸ ಸುದ್ದಿ ಏನಂದ್ರೆ ಸ್ಯಾಂಡಲ್ ವುಡ್ ನ ಬ್ಯಾಚುಲರ್ ದಿಗಂತ್ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ.
‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ‘ಯಾರೀ ಮೀಟರ್’ ಚೆಕ್ ಮಾಡುವ ಸುತ್ತು ಮುಗಿದ ಮೇಲೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು. ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.? ಎಂದು ಶಿವಣ್ಣ ಕೇಳಿದರು.
ಅದಕ್ಕೆ ಉತ್ತರಿಸಿದ ದಿಗಂತ್, ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ ಎಂದು ಹೇಳಿದ್ರು.
ಶಿವಣ್ಣ ಮತ್ತೆ ಬೈಕಿನಲ್ಲಿ ಲಾಂಗ್ ಡೈವ್ ಹೋಗಬೇದಾರೆ ಯಾವ ನಟಿಯನ್ನ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ರು. ಗೋಕರ್ಣಕ್ಕೆ ನಿಧಿ ಸುಬ್ಬಯ್ಯ ಮತ್ತು ಊಟಿಗೆ ಐಂದ್ರಿತಾ ರೇ ಎಂದು ದಿಂಗತ್ ಉತ್ತರಿಸಿದ್ರು.
ಇದೇ ವರ್ಷ ಮದುವೆ ಆಗಲು ಪ್ಲಾನ್ ಮಾಡಿದ್ದೇನೆ ಎಂದು ದಿಗಂತ್ ಹೇಳಿದ ಕೂಡಲೆ, ಐಂದ್ರಿತಾ ರೇ ಸಿದ್ಧವಾಗಿದ್ದಾರೆ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ ಎಂದು ಶಿವಣ್ಣ ಹೇಳಿದ್ರು.