ಬೆಂಗಳೂರು: ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಮದುವೆಗೆ ಸಜ್ಜಾಗಿದೆ. ದೂದ್ ಪೇಡಾ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಸಿಂಗಲ್ ಲೈಫ್ಗೆ ಗುಡ್ಬಾಯ್ ಹೇಳಿ ಮಿಂಗಲ್ ಆಗೋದಕ್ಕೆ ರೆಡಿಯಾಗಿದ್ದಾರೆ.
ಇತ್ತೀಚೆಗೆ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ರೆಡಿಯಾಗಿದೆ. ಮದುವೆ ವಿಷಯ ಕೇಳಿಬಂದಾಗಲೆಲ್ಲಾ ಎಲ್ಲಾ ಫೇಕ್ ಎನ್ನುತ್ತಿದ್ದ ಈ ಕ್ಯೂಟ್ ಕಪಲ್ ಇದೀಗ ಬ್ಯಾಚುಲರ್ ಲೈಫ್ಗೆ ಗುಡ್ಬಾಯ್ ಹೇಳೋಕೆ ತುದಿಗಾಲಲ್ಲಿ ನಿಂತಿದ್ದಾರೆ.
Advertisement
ಹೌದು, ದಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ಸ್ಗಳಾದ ದೂದ್ಪೇಡಾ ದಿಗಂತ್ ಹಾಗೂ ಹಾಟಿ ಐಂದ್ರಿತಾ ಗೃಹಸ್ಥಾಶ್ರಮಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ. ತಮ್ಮಿಬ್ಬರ ಮದುವೆ ವಿಷ್ಯ ಕೇಳಿಬಂದಾಗಲೆಲ್ಲಾ ಫೇಕ್ ಫೇಕ್ ಎಂದು ಪೋಸ್ಟ್ ಮಾಡುತ್ತಿದ್ದ ಐಂದ್ರಿತಾ ಇದೀಗ ಸೈಲೆಂಟಾಗಿದ್ದಾರೆ.
Advertisement
Advertisement
ಮನಸಾರೆ ಪ್ರೀತಿ ಮಾಡಿ ಹಲವು ವರ್ಷಗಳಿಂದ ಲವ್ ಲೈಫ್ನಲ್ಲಿರುವ ಇವರು ಅದ್ಯಾವಾಗ ಮದುವೆಯಾಗ್ತಾರೆ? ನಿಜಕ್ಕೂ ಇವರಿಬ್ಬರು ಮದುವೆಯಾಗ್ತಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಅದಕ್ಕೆಲ್ಲಾ ಇದೀಗ ಬ್ರೇಕ್ ಬಿದ್ದಿದೆ. ಒಂಟಿ ಜೀವನ ಸಾಕಾಗಿ ಜಂಟಿಯಾಗಿ ಬದುಕುವುದಕ್ಕೆ ಈ ಜೋಡಿ ನಿರ್ಧರಿಸಿದೆ.
Advertisement
ತಾನು ಮನಸಾರೆ ಪ್ರೀತಿ ಮಾಡಿರುವ ಹುಡುಗನ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವುದು ಐಂದ್ರಿತಾ ಕನಸಾಗಿತ್ತು. ಅದರಂತೇ ತನ್ನ ಡ್ರೀಮ್ ಗರ್ಲ್ನ ಆದಷ್ಟು ಬೇಗ ಮದುವೆ ಮಾಡ್ಕೊಂಡು ಮನೆಗೆ ಕರ್ಕೊಂಡು ಬರಬೇಕು ಎನ್ನುವುದು ದಿಗಂತ್ ಆಸೆ ಆಗಿತ್ತು. ಒಟ್ಟಿನಲ್ಲಿ ಇಬ್ಬರ ಕನಸು ಈಡೇರುವ ಘಳಿಗೆ ಹತ್ತಿರ ಬಂದಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ನಂ.1 ಯಾರೀ’ ಮನೆಗೆ ಹೋದಾಗ ತಮ್ಮ ಮದುವೆ ವಿಷಯವನ್ನು ದಿಗಂತ್ ರಿವೀಲ್ ಮಾಡಿದ್ದರು. ಈ ವರ್ಷನೇ ಮದುವೆ ಆಗಬೇಕೆಂದು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಯಾವಾಗ ಎನ್ನುವುದು ದಿಗಂತ್ ಗುಟ್ಟಾಗಿರಿಸಿದ್ದರು. ಕೊನೆಗೂ ತಮ್ಮ ಮದುವೆ ಬಗ್ಗೆ ಮಾಧ್ಯಮವೊಂದಲ್ಲಿ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಐಂದ್ರಿತಾ- ದಿಗಂತ್ ನಿರ್ಧರಿಸಿದ್ದಾರೆ. ಮನೆಯವರ ಗ್ರೀನ್ ಸಿಗ್ನಲ್ಗಾಗಿ ಇಬ್ಬರು ವೇಯ್ಟ್ ಮಾಡುತ್ತಿದ್ದು, ಎರಡು ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕರೆ ಮದುವೆ ತಯಾರಿ ಶುರುವಾಗಲಿದೆ. ಸದ್ಯ ಇಬ್ಬರೂ ಕಮಿಟ್ ಆಗಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.