ಬೆಂಗಳೂರು: ಕೊರೊನಾ ವೈರಸ್ ಎಂಬ ಶಬ್ದ ಕೇಳಿದರೆ ಸಾಕು ಇಡೀ ವಿಶ್ವವೇ ಬೆಚ್ಚಿಬೀಳುತ್ತಿದೆ. ಇತ್ತ ಭಾರತಲ್ಲೂ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಾರಿಮಾಡಿದ್ದ ಲಾಕ್‍ಡೌನ್ ಅವಧಿಯನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಬಡ ರೋಗಿಗಳು ಔಷಧಿ ಸಿಗದೇ ಪರದಾಡಬಾರದೆಂದು ನಟ ದಿಗಂತ್ ಅವರು ಬಡವರ ನೆರವಿಗೆ ನಿಂತಿದ್ದಾರೆ.
Advertisement
ಹೌದು. ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತೃತ್ವದಲ್ಲಿ ನಟ ದಿಗಂತ್ ಹಾಗೂ ಯತೀಶ್ ತಂಡ ಬಡವರ ನೆರವಿಗೆ ಮುಂದಾಗಿದೆ. ಔಷಧಿಗಾಗಿ ಪರದಾಡುವ ಬಡವರಿಗೆ ಅವರ ಮನೆ ಬಾಗಲಿಗೆ ಔಷಧಿಯನ್ನು ತಲುಪಿಸುವ ಕೆಲಸವನ್ನು ತಂಡ ಮಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಔಷಧಿಯ ಅಗತ್ಯವಿರುವ ಮಂದಿಗೆ ಅದನ್ನು ತಲುಪಿಸುವ ಕೆಲಸದಲ್ಲಿ ತಂಡ ನಿರತವಾಗಿದೆ.
Advertisement
Advertisement
ಇತ್ತ ಲಾಕ್‍ಡೌನ್ ಮತ್ತೆ ಎರಡು ವಾರ ವಿಸ್ತರಣೆ ಆದ ಕಾರಣಕ್ಕೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ನೆರವಿಗೆ ಮುಂದೆ ಬಂದಿರುವ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ಸದಸ್ಯರು ಹಾಗೂ ದಿಗಂತ್ ಅವರ ತಂಡ ಜೊತೆಗೂಡಿ ಔಷಧಿ ಅಗತ್ಯವಿರುವ ಬಡವರಿಗೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
Advertisement
ಇಂದು ಬೆಳಗ್ಗೆ ಕೊಡಗಿನಿಂದ ಹೊರಟಿದ್ದ ತಂಡ ಬೈಕ್‍ನಲ್ಲಿ ತೆರಳಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಔಷಧಿ, ಮಾತ್ರೆಯನ್ನು ನೀಡಿ ಸಹಾಯ ಮಾಡಿದ್ದಾರೆ. ತಂಡದ ಈ ವಿನೂತನ ಕಾರ್ಯಕ್ಕೆ ಡಿಸಿಪಿ ಭೀಮಾಶಂಕರ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ತಂಡಕ್ಕೆ ಮತ್ತು ದಿಗಂತ್ ತಂಡಕ್ಕೆ ಶುಭಕೋರಿದ್ದಾರೆ.
ಈ ಹಿಂದೆ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ಲಾಕ್‍ಡೌನ್‍ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಐಂದ್ರಿತಾ, ನಮ್ಮ ನೆರೆಹೊರೆಯಲ್ಲಿರುವ ನಾಲ್ಕು ಕಾಲಿನ ಸ್ನೇಹಿತರನ್ನು ನಾವು ಮರೆಯಬಾರದು. ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ ಮತ್ತು ಕೊರೊನಾದಿಂದ ಪ್ರಸ್ತುತ ದೇಶ ಲಾಕ್‍ಡೌನ್ ಆಗಿದೆ. ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಊಂಟಾಗಿದೆ. ಆದ್ದರಿಂದ ನೀವು ಮನೆಗೆ ಬೇಕಾದ ದಿನಸಿ ತರಲು ಹೊರಹೋದಾಗ ದಯವಿಟ್ಟು ನಾಯಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.
Let’s not forget about our four legged friends in our neighbourhood..With temperatures rising this summer and our current lockdown situation there’s little food n water source for them..While u step out for groceries please leave some for the voiceless ???????? #strayanimalsneedhelp pic.twitter.com/G8xsoy8w1i
— Aindrita Ray (@AindritaR) March 28, 2020
ಹೀಗೆ ಸಾಕಷ್ಟು ಮಂದಿ ಸಿನಿ ತಾರೆಯರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ, ನಿರ್ಗತಿಕರಿಗೆ ಹಾಗೂ ಮೂಕಪ್ರಾಣಿಗಳ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.