‘ಮಾರ್ಟಿನ್’ ನಟ ಧ್ರುವ ಸರ್ಜಾ (Dhruva Sarja) ಅವರು ಮಗ ಹಯಗ್ರೀವ ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮಗನ ಮೊದಲ ವರ್ಷದ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಇದನ್ನೂ ಓದಿ:ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿ ಹೈಡ್ರಾಮಾ
ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಎರಡನೇ ಮಗ ಹಯಗ್ರೀವ (Hayagreeva) ಹುಟ್ಟುಹಬ್ಬವನ್ನು ನಿನ್ನೆ (ಸೆ.18) ಆಚರಿಸಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಹಯಗ್ರೀವ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಈ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್, ಅರ್ಜುನ್ ಸರ್ಜಾ ಕುಟುಂಬ ಮತ್ತು ‘ಮಜಾ ಟಾಕೀಸ್’ ಪವನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ‘ಕೆಡಿ’ ಮತ್ತು ‘ಮಾರ್ಟಿನ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಮೊದಲ ಸಿನಿಮಾ ಅದ್ಧೂರಿ ಚಿತ್ರದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಧ್ರುವ ನಟಿಸಿರುವ ಮುಂಬರುವ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.