ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD) ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಗಳ ಜೊತೆಗಿನ ಫೋಟೋವನ್ನ ನಟ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗಿನ ಚೆಂದದ ವೀಡಿಯೋವೊಂದನ್ನ ಧ್ರುವ ಶೇರ್ ಮಾಡಿದ್ದಾರೆ.
ಧ್ರುವ ಸರ್ಜಾ- ಪ್ರೇರಣಾ (Prerana) ಬದುಕಲ್ಲಿ ಪುಟ್ಟ ಲಕ್ಷ್ಮಿಯ ಆಗಮನವಾದ ಮೇಲೆ ಬದುಕು ಬದಲಾಗಿದೆ. ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಳೆದ ವರ್ಷ ಅಕ್ಟೋಬರ್ 5ರಂದು ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗಳ ಮುಖ ತೋರಿಸಿರಲಿಲ್ಲ. ಇತ್ತೀಚಿಗೆ ಮಗಳ ಮುದ್ದಾದ ಫೋಟೋವನ್ನ ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ.
ಈಗ ಧ್ರುವ ಶೇರ್ ಮಾಡಿರುವ ಮುದ್ದು ಮಗಳ ವೀಡಿಯೋಗೆ ಅಭಿಮಾನಿಗಳಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಪರಿಸರ ನಡುವೆ ಚೆಂದದ ಫೋಟೋಶೂಟ್ ಮಾಡಿಸಿ, ಬಳಿಕ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವ ದೃಶ್ಯಗಳು ಈ ವೀಡಿಯೋದಲ್ಲಿದೆ. ಮಗಳ 7 ತಿಂಗಳ ಸುಂದರ ಜರ್ನಿಯನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ
View this post on Instagram
ಧ್ರುವ ಸರ್ಜಾ – ಪ್ರೇರಣಾ ಮುಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. 7 ತಿಂಗಳ ನಂತರ ಫೋಟೋ ರಿವೀಲ್ ಮಾಡಿರೋ ನಟ ಮುಂದೆ ಮಗಳಿಗೆ ಏನು ಹೆಸರಿಡಬಹುದು ಎಂದು ಎದುರುನೋಡ್ತಿದ್ದಾರೆ. ಪಕ್ಕಾ ಫ್ಯಾಮಿಲಿ ಮೆನ್ ಆಗಿರೋ ಧ್ರುವ- ಪುಟ್ಟ ಮಗಳ ವೀಡಿಯೋ ಫ್ಯಾನ್ಸ್ ಖುಷಿಪಡ್ತಿದ್ದಾರೆ.