ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಶೂಟಿಂಗ್‌ಗೆ ಬ್ರೇಕ್ ನೀಡಿ ‘ಭುವನಂ ಗಗನಂ’ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಈ ವೇಳೆ, ಅಭಿಮಾನಿಗಳಿಗೆ ಧ್ರುವ ಸರ್ಜಾ ಮನವಿವೊಂದನ್ನು ಮಾಡಿದ್ದಾರೆ.
Advertisement
ಪ್ರಮೋದ್, ಪೃಥ್ವಿ ಅಂಬರ್ ನಟನೆಯ ‘ಭುವನಂ ಗಗನಂ’ ಚಿತ್ರದ ಟೀಸರ್ ಲಾಂಚ್ ಇವೆಂಟ್‌ಗೆ ಧ್ರುವ ಸರ್ಜಾ ಅತಿಥಿಯಾಗಿ ಆಗಮಿಸಿದ್ದರು. ನಾನು ಅವರ ಅಭಿಮಾನಿಗಳು ಎನ್ನಬೇಡಿ. ಪ್ರತಿ ಸಿನಿಮಾಗೂ ಪ್ರೀತಿ ತೋರಿಸಿ ಎಂದು ನಟ ಫ್ಯಾನ್ಸ್‌ಗೆ ಸಲಹೆ ನೀಡಿದ್ದಾರೆ.
Advertisement
Advertisement
ನಾಳೆ ಅಪ್ಪು ಸರ್ ಹುಟ್ಟುಹಬ್ಬ ಎಂದು ಧ್ರುವ ಸರ್ಜಾ, ಪುನೀತ್‌ರನ್ನು ಸ್ಮರಿಸಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇತ್ತೀಚೆಗೆ ತುಸು ಹೆಚ್ಚಾಗಿದೆ. ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವುದು, ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕಿಂತಲೂ ಮುಂದೆ ಹೋಗಿ, ಇತರೆ ನಟನ ಸಿನಿಮಾವನ್ನೇ ತುಳಿಯುವ ಪ್ರಯತ್ನಗಳೂ ನಡೆದಿವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸೆಕ್ಸಿಯಾಗಿ ಡಾನ್ಸ್ ಮಾಡಲಾರೆ: ನಟಿ ಸಮಂತಾ ಘೋಷಣೆ
Advertisement
ನಾವೆಲ್ಲರೂ ಒಂದೇ ಎಂದಿದ್ದಾರೆ. ಯಾರ ಫ್ಯಾನ್ ಆದರೂ ಆಗಿರಿ ಆದರೆ ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡಿರಿ ಎಂದು ಮನವಿ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬೆಂಬಲಿಸಿ ಎಂದು ಧ್ರುವ ಮಾತನಾಡಿದ್ದಾರೆ.