ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಅಣ್ಣ ಚಿರು ಸರ್ಜಾ (Chiru Sarja) ಸಮಾಧಿ ಪಕ್ಕ ಮಲಗಿರುವ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿಶೇಷ ವಿಡಿಯೋವೊಂದನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ. ಅಣ್ಣನ ಸಮಾಧಿ ಮೇಲೆ ಮಗಳನ್ನು (Daughter) ಆಟವಾಡಿಸುತ್ತಿರುವ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್
ಚಿರು ಸರ್ಜಾ ಅಗಲಿ 3 ವರ್ಷಗಳು ಕಳೆದಿದೆ. ಅಣ್ಣ ಅಗಲಿಕೆಯ ನೋವು ಇನ್ನೂ ಧ್ರುವಗೆ ಮಾಸಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಣ್ಣನ ಸಮಾಧಿ ಮೇಲೆ ಮುದ್ದು ಮಗಳನ್ನ ಧ್ರುವ ಆಟ ಆಡಿಸುತ್ತಾ ಇರುವ ವಿಡಿಯೋ ಮನ ಕಲಕುವಂತಿದೆ. ವಿಡಿಯೋ ನೋಡಿ ಖುಷಿ ಪಡಬೇಕಾ? ವಿಧಿಯಾಟಕ್ಕೆ ಹಿಡಿ ಶಾಪ ಹಾಕಬೇಕಾ ಅಂತಿದ್ದಾರೆ ಅಭಿಮಾನಿಗಳು.
ಧ್ರುವ ಪತ್ನಿ ಪ್ರೇರಣಾ (Prerana) ಸೀಮಂತ ಶಾಸ್ತ್ರ (Baby Shower) ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಆಗ ಮಗಳಿಗೆ ಪ್ರೇರಣಾ ಚಿರು ಫೋಟೋವನ್ನ ತೋರಿಸಿ ಮಾತನಾಡುತ್ತಿದ್ದರು. ಅಂದಿನ ಆ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.
ಅಕ್ಟೋಬರ್ 6ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ (Rajamartanda Film) ರಿಲೀಸ್ ಆಗುತ್ತಿದೆ. ಚಿರು- ಮೇಘನಾ ಪುತ್ರ ರಾಯನ್ (Rayan) ಕೂಡ ನಟಿಸಿದ್ದಾರೆ. ಚಿರು ಪಾತ್ರಕ್ಕೆ ಇಡೀ ಸಿನಿಮಾ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]