ಬೆಂಗಳೂರು: ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ‘ಪೊಗರು’ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಧೃವ ಸರ್ಜಾ ಚಿತ್ರದಲ್ಲಿ ಬರುವ 15 ನಿಮಿಷದ ಪಾತ್ರಕ್ಕಾಗಿ ಬರೋಬ್ಬರಿ 15 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.
ನಂದ ಕಿಶೋರ್ ನಿರ್ದೇಶನದಲ್ಲಿ ‘ಪೊಗರು’ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣವೂ ನಡೆದಿದ್ದು, ಧೃವ ಸರ್ಜಾ ಶೂಟಿಂಗ್ ನಲ್ಲಿ ಬ್ಯೂಸಿ ಆಗಿದ್ದಾರೆ. ಚಿತ್ರದಲ್ಲಿ ನಾಯಕ ನಟನ ಬಾಲ್ಯ ಜೀವನದ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಬಂದರೆ ಸಾಮಾನ್ಯವಾಗಿ ಆ ಪಾತ್ರಕ್ಕಾಗಿ ಬಾಲ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ.
Advertisement
Advertisement
ಪೊಗರು ಸಿನಿಮಾದಲ್ಲಿ ನಾಯಕನ ಬಾಲ್ಯದ 7ನೇ ಕ್ಲಾಸ್ ವಿದ್ಯಾರ್ಥಿಯ 15 ನಿಮಿಷದ ಫ್ಲ್ಯಾಶ್ ಬ್ಯಾಕ್ ಸೀನ್‍ಗಾಗಿ ಚಿತ್ರತಂಡ ಬಾಲ ಕಲಾವಿದರನ್ನು ಬಳಸಿಕೊಳ್ಳಲು ತೀರ್ಮಾನಿಸಿತ್ತು. ಧೃವ ಸರ್ಜಾ ಮಾತ್ರ ಆ ಪಾತ್ರವನ್ನು ತಾವೇ ನಿರ್ವಹಿಸುವುದಾಗಿ ತಿಳಿಸಿ, 30 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡು ಬಾಲಕನಾಗಿ ಕಾಣಿಸಿಕೊಂಡಿದ್ದಾರೆ. 7ನೇ ಕ್ಲಾಸ್ ವಿದ್ಯಾರ್ಥಿ ಪಾತ್ರದಲ್ಲಿ ಧೃವ ಸರ್ಜಾ ಗುರುತು ಸಿಗದ ರೀತಿಯಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ.
Advertisement
ಚಿತ್ರದ ಕಥೆ ಟ್ವಿಸ್ಟ್ ನಿಂದ ಒಳಗೊಂಡಿದ್ದು, 15 ನಿಮಿಷಕ್ಕೊಮ್ಮೆ ನೋಡುಗರಿಗೆ ರೋಮಾಂಚನವನ್ನು ನೀಡಲಿದೆ. ಪಾತ್ರಕ್ಕಾಗಿ ಧೃವ ಸರ್ಜಾ ಡೆಡಿಕೇಷನ್ ಮೆಚ್ಚುವಂತಹದ್ದು ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ.
Advertisement
ಈ ಹಿಂದೆ ಕಾಲಿವುಡ್‍ನಲ್ಲಿ ನಟರಾದ ಸೂರ್ಯ ಮತ್ತು ಧನುಷ್ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ನೆನಪಿರಲಿ ಪ್ರೇಮ್ ಕೂಡ ‘ಚಾರ್ ಮಿನಾರ್’ ಸಿನಿಮಾದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಹೈಸ್ಕೂಲ್ ವಿದ್ಯಾರ್ಥಿಯಾಗಿ ನಟಿಸಿದ್ದರು. ಬಾಲಿವುಡ್‍ನಲ್ಲಿ ಸಹ ಈ ರೀತಿಯ ಪ್ರಯೋಗಗಳು ಸಹ ನಡೆದಿವೆ. ಸೂಪರ್ ಹಿಟ್ ‘ದಂಗಲ್ ಸಿನಿಮಾಗಾಗಿ ಆಮೀರ್ ಖಾನ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಟಾಲಿವುಡ್‍ನಲ್ಲಿ ಅನುಷ್ಕಾ ಶೆಟ್ಟಿ ತಮ್ಮ ‘ಸೈಜ್ ಜೀರೋ’ ಸಿನಿಮಾಗಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದರು.