ಕುಟುಂಬದ ಜೊತೆ ಗೋಶಾಲೆಗೆ ಧ್ರುವ ಸರ್ಜಾ ಭೇಟಿ

Public TV
1 Min Read
dhruva sarja

‘ಮಾರ್ಟಿನ್’ (Martin) ನಟ ಧ್ರುವ ಸರ್ಜಾ (Dhruva Sarja) ಅವರು ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬೆಂಗಳೂರಿನ ಗೋಶಾಲೆಗೆ ಭೇಟಿ ನೀಡಿದ್ದಾರೆ. ಫ್ಯಾಮಿಲಿ ಜೊತೆ ಧ್ರುವ ಕಾಲ ಕಳೆದಿದ್ದಾರೆ. ಇದನ್ನೂ ಓದಿ:ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ

dhruva

ಬೆಂಗಳೂರಿನ ಗೋಶಾಲೆಯಲ್ಲಿ ಗೋವುಗಳ ಜೊತೆ ಧ್ರುವ ಕುಟುಂಬ ಸಮಯ ಕಳೆದಿದ್ದಾರೆ. ಗೋವುಗಳಿಗೆ ಮೇವು ತಿನಿಸಿ ಸಂಭ್ರಮಿಸಿದ್ದಾರೆ. ಇನ್ನೂ ಗೋಶಾಲೆಯ ಸೇವೆಗೆ ಧ್ರುವ ಸರ್ಜಾ ಕೈ ಜೋಡಿಸಿದ್ದಾರೆ. ತಿಂಗಳಿಗೆ ಎರಡು ಬಾರಿ ಗೋಶಾಲೆಗೆ ಧ್ರುವ ಕುಟುಂಬದ ಸದಸ್ಯರು ಭೇಟಿ ಕೊಡುತ್ತಾರೆ.

dhruva sarja 1

ಅಂದಹಾಗೆ, `ಮಾರ್ಟಿನ್’ ರಿಲೀಸ್ ಬಳಿಕ ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಧ್ರುವಗೆ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ.

Share This Article