ನಂಜನಗೂಡು ದೇವಸ್ಥಾನಕ್ಕೆ ಭೇಟಿ ಕೊಟ್ಟ ಧ್ರುವ ಸರ್ಜಾ ದಂಪತಿ

Public TV
1 Min Read
dhruva sarja

ಟ ಧ್ರುವ ಸರ್ಜಾ (Dhruva Sarja) ದಂಪತಿ ಮಕ್ಕಳಿಗೆ ಪಂಚಮುಡಿ ಶಾಸ್ತ್ರ ಮಾಡಿಸಲು ನಂಜನಗೂಡು ದೇವಸ್ಥಾನಕ್ಕೆ (Temple) ಭೇಟಿ ನೀಡಿದ್ದಾರೆ. ಮನೆದೇವರಿಗೆ ಮಕ್ಕಳ ಪ್ರಥಮ ಮುಡಿ ಕೊಡುವ ಶಾಸ್ತ್ರ ಮಾಡಿದ್ದಾರೆ ಧ್ರುವ ಸರ್ಜಾ ದಂಪತಿ. ರುದ್ರಾಕ್ಷಿ ಹಾಗೂ ಹಯಗ್ರೀವನ ಪಂಚಮುಡಿ ಶಾಸ್ತ್ರ ಹೇಗಿತ್ತು? ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

dhruva sarja 1

ಸಂಪ್ರದಾಯ ಅಂತ ಬಂದರೆ ಧ್ರುವ ಸರ್ಜಾ ಮುಂದೆ ಇರುತ್ತಾರೆ. ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಕಳೆದ ಜನವರಿಯಲ್ಲಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದರು. ಪುತ್ರಿಗೆ ರುದ್ರಾಕ್ಷಿ ಪುತ್ರನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಇದೀಗ ಇಬ್ಬರೂ ಮಕ್ಕಳಿಗೆ ಒಟ್ಟಿಗೆ ಮುಡಿ ಕೊಡಿಸಿದ್ದಾರೆ. ಇದನ್ನೂ ಓದಿ:‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಎಂದು ರಾಧಿಕಾ ಪಂಡಿತ್ ಬ್ಯೂಟಿ ಬಣ್ಣಿಸಿದ ನೆಟ್ಟಿಗರು

ನಂಜನಗೂಡು ಶ್ರೀಕಂಠೇಶ್ವರ ಧ್ರುವ ಸರ್ಜಾರ ಮನೆ ದೇವರು. ಹೀಗಾಗಿ ಮಕ್ಕಳ ಪ್ರಥಮ ಮುಡಿ ಮನೆದೇವರಿಗೆ ಅರ್ಪಿಸಿದ್ದಾರೆ. ರುದ್ರಾಕ್ಷಿ ಹಯಗ್ರೀವನಿಗೆ ಒಟ್ಟಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾರನ್ನ ಹತ್ತಿರದಿಂದ ನೋಡಲು ನಂಜನಗೂಡಲ್ಲಿ ಅಪಾರ ಅಭಿಮಾನಿಗಳು ಸೇರಿದ್ದರು.

ಧ್ರುವ ಸರ್ಜಾ ನಟನೆಯ ‘ಕೆಡಿ’ (KD Film) ಮತ್ತು ಮಾರ್ಟಿನ್‌ (Martin Film) ಸಿನಿಮಾಗಳು ಅವರ ಕೈಯಲ್ಲಿವೆ. ಈ ವರ್ಷ ಎರಡು ಸಿನಿಮಾಗಳು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ.

Share This Article