ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ನಟನನ್ನು ನೋಡಲು ಇದೀಗ ಒಬ್ಬೊಬ್ಬರೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ ಇಂದು (ಜು.2) ದರ್ಶನ್ ಭೇಟಿಗೆ ಅವಕಾಶ ಸಿಗದೇ ಧನ್ವೀರ್ ವಾಪಸ್ ಆಗಿದ್ದಾರೆ.
ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟ ಧನ್ವೀರ್ ಅವರು ದರ್ಶನ್‌ರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ನಟ ಬಂದಿರುವ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗಾಗಲೇ ಎರಡು ವಿಸಿಟ್ ಆಗಿರುವ ಹಿನ್ನಲೆ ಧನ್ವೀರ್‌ಗೆ ಸೋಮವಾರ ಬರಲು ಜೈಲಿನ ಸಿಬ್ಬಂದಿಗಳ ಮೂಲಕ ದರ್ಶನ್ ಸೂಚಿಸಿದ್ದಾರೆ. ಭೇಟಿಗೆ ಅವಕಾಶ ಸಿಗದೇ ನಟ ವಾಪಸ್ ಆಗಿದ್ದಾರೆ.
ಆದರೆ ಮಾಧ್ಯಮಕ್ಕೆ ಜಾಸ್ತಿ ಹೊತ್ತು ಮಾತನಾಡಲು ಆಗಲಿಲ್ಲ. ದರ್ಶನ್ ಬೇಜಾರಿನಲ್ಲಿದ್ದಾರೆ ಎಂದು ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಅದರಂತೆ ಜು.1ರಂದು ದರ್ಶನ್‌ರನ್ನು ಅವರ ಕುಟುಂಬ ಭೇಟಿ ಮಾಡಿದೆ. ಬಳಿಕ ಕುಟುಂಬದ ಆಪ್ತರೊಬ್ಬರು ನಟನನ್ನು ಭೇಟಿಯಾಗಿ ಬಂದಿದ್ದಾರೆ.