ಸಂಗೀತ ಮಾಂತ್ರಿಕ ಇಳಯರಾಜ (Ilaiyaraaja) ಅವರಿಗೆ ಇಂದು (ಜೂನ್ 2) 81ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಳಯರಾಜ ಜೀವನದ ಕಥೆ ಸಿನಿಮಾ ರೂಪದಲ್ಲಿ ಬರುತ್ತಿದ್ದು, ಚಿತ್ರದ ಪೋಸ್ಟರ್ ಅನ್ನು ಧನುಷ್ (Dhanush) ರಿಲೀಸ್ ಮಾಡಿ ಸಂಗೀತ ಮಾಂತ್ರಿಕ ಇಳಯರಾಜಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮದುವೆಯಾದ್ರೂ ಮಕ್ಕಳಾಗಲ್ಲ- ಆರೋಗ್ಯ ಸಮಸ್ಯೆ ಬಗ್ಗೆ ಬಾಯ್ಬಿಟ್ಟ ಶ್ರುತಿ ಹಾಸನ್
Happy birthday to the one and only @ilaiyaraaja sir. pic.twitter.com/adYPIqjc5s
— Dhanush (@dhanushkraja) June 2, 2024
ಕಾಲಿವುಡ್ ನಟ ಧನುಷ್ ಅವರು ಇಳಯರಾಜ ಅವರ ಬಯೋಪಿಕ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಳಯರಾಜ್ ಬರ್ತಡೇಗೆ ಧನುಷ್ & ಚಿತ್ರತಂಡ ವಿಶೇಷವಾಗಿ ಶುಭಕೋರಿದೆ. ಸಾವಿರಾರು ಜನರ ಮುಂದೆ ಹಾರ್ಮೋನಿಯಂ ಹಿಡಿದು ವೇದಿಕೆಯಲ್ಲಿ ನಿಂತಿರುವ ಪೋಸ್ಟರ್ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮೇಷ್ಟ್ರೇ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಇಳಯರಾಜ ಬರೋಪಿಕ್‌ನಲ್ಲಿ ಧನುಷ್ ನಟಿಸೋದು ಅಧಿಕೃತವಾಗಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.