ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ (Wayanad Landslide) ಸತ್ತವರ ಸಂಖ್ಯೆ ಈಗ 400 ದಾಟಿದೆ. ಈ ದುರಂತದ ನಂತರ ಕೇರಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕರು ಮನೆಯವರನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ತಮಿಳಿನ ನಟ ಧನುಷ್ (Dhanush) ನೆರವಾಗಿದ್ದಾರೆ.
ವಯನಾಡಿನ ದುರಂತಕ್ಕೆ ಸೌತ್ ನಟ, ನಟಿಯರು ದೇಣಿಗೆ ನೀಡುವ ಮೂಲಕ ಸಂತ್ರಸ್ಥರ ಸಹಾಯಕ್ಕೆ ನಿಂತಿದ್ದಾರೆ. ಈಗ ಕಾಲಿವುಡ್ (Kollywood) ನಟ ಧನುಷ್ ಕೂಡ ಕೇರಳದ ಸಿಎಂ ಫಂಡ್‌ಗೆ 25 ಲಕ್ಷ ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ವಯನಾಡು ದುರಂತದಿಂದ ಸಂಕಷ್ಟದಲ್ಲಿರುವವರಿಗೆ ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna), ಅಲ್ಲು ಅರ್ಜುನ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ಸೂರ್ಯ ದಂಪತಿ, ಚಿಯಾನ್ ವಿಕ್ರಮ್ ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ:ನಾನಿನ್ನೂ ವಿವಾಹಿತ ಎಂದು ಡಿವೋರ್ಸ್ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್
ಇತ್ತೀಚೆಗೆ ಧನುಷ್ ನಟನೆಯ ‘ರಾಯನ್’ (Rayaan) ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸ್ತುತ ರಶ್ಮಿಕಾ, ನಾಗಾರ್ಜುನ ಜೊತೆಗಿನ ಕುಬೇರ ಸಿನಿಮಾದಲ್ಲಿ ಧನುಷ್ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ಚಿತ್ರಗಳನ್ನು ಕೂಡ ಅವರು ಒಪ್ಪಿಕೊಂಡಿದ್ದಾರೆ.