ಸ್ಯಾಂಡಲ್‌ವುಡ್ ನಟ ಧನಂಜಯ್‌ಗೆ(Dhananjay) ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟನ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಡಾಲಿ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ.
ಡಾಲಿ ನಟನೆಯ ವಿಚಾರಕ್ಕೆ ಬಂದ್ರೆ ನಟರಾಕ್ಷಸ ಎಂಬುದನ್ನ ಪ್ರೂವ್ ಮಾಡಿದ್ದಾರೆ. ಬಹುಮುಖ ಪ್ರತಿಭೆ ಎಂದೇ ಹೇಳಬಹುದು. ಕನ್ನಡದ ಚಿತ್ರಗಳ ಜತೆಗೆ ಪರಭಾಷೆಗಳಲ್ಲೂ ಡಾಲಿ ಈಗ ಘರ್ಜಿಸುತ್ತಿದ್ದಾರೆ. ಹೀಗಿರುವಾಗ ಧನಂಜಯ್ ಅವರ ಮದುವೆಯ ಅಪ್‌ಡೇಟ್‌ಗಾಗಿ ಕಾದು ಕೂತಿದ್ದ ಫ್ಯಾನ್ಸ್‌ಗೆ, ಡಾಲಿ(Dali) ಮಾತು ಕೇಳಿ ಶಾಕ್ ಆಗಿದ್ದಾರೆ. ಮದುವೆಯ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪ್ರಭಾಸ್ (Prabhas) ಸರ್ ಮದುವೆಯಾಗಿದ್ದಾರಾ? ಅವರು ಮದುವೆ ಆದರೆ ನಾನು ಮದುವೆಯಾಗುತ್ತೀನಿ ಎಂದು ಮಾತನಾಡಿದ್ದಾರೆ. ಇಲ್ಲವೆಂದರೆ ನನಗೂ ಮದುವೆಯೇ ಬೇಡ, ಹಾಗೆ ಇದ್ದು ಬಿಡುತ್ತೇನೆ ಎಂದಿದ್ದಾರೆ. ಹೀಗೆ ಹೇಳಿರುವುದಕ್ಕೆ ಕಾರಣ ಕೂಡ ಡಾಲಿ ತಿಳಿಸಿದ್ದಾರೆ. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್
ನನ್ನ ಸ್ನೇಹಿತರು ಇದ್ದಾರೆ. ಅವರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡಿದರೆ, ಧನಂಜಯ್ ಮದುವೆ ಆದಾಗ ನಾವು ಮದುವೆಯಾಗುತ್ತೀವಿ ಎಂದಿದ್ದಾರೆ. ಅದೇ ರೀತಿ ನಾನು ಕೂಡ ಪ್ರಭಾಸ್ ಮತ್ತು ಸಲ್ಮಾನ್ ಖಾನ್ ನನ್ನ ಹಿರಿಯ ಸಹೋದರರಂತೆ. ಅವರು ಮೊದಲು ಮದುವೆ ಆಗಿಲಿ ಎಂದು ಹೇಳಿದ್ದಾರೆ.
`ಬಡವ ರಾಸ್ಕಲ್’ ಚಿತ್ರದಲ್ಲಿ ಅಮೃತ ಮತ್ತು ಡಾಲಿ ಜೋಡಿ ನೋಡಿ, ಇವರಿಬ್ಬರು ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಧನಂಜಯ್ ಹೇಳಿಕೆ ಅಚ್ಚರಿ ಮೂಡಿಸಿದೆ.