ಸ್ಯಾಂಡಲ್‌ವುಡ್‌ಗೆ (Sandalwood) ಇದೀಗ ಸ್ಟಾರ್ ಕಿಡ್‌ಗಳ ಹಾವಳಿ ಜೋರಾಗಿದೆ. `ನೆನಪಿರಲಿ’ ಪ್ರೇಮ್ (Nenapirali Prem) ಅವರ ಮುದ್ದು ಮಗಳು ಚಂದನವನಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಯುವ ನಟಿಯ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಅಚ್ಚರಿಪಡ್ತೀರಾ.
ಗಾಂಧಿನಗರದಲ್ಲಿ ಇದೀಗ ಮುದ್ದು ಕಲಾವಿದೆಯ ಪಾದಾರ್ಪಣೆಯಾಗುತ್ತಿದೆ. ಡಾಲಿ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ (Amrutha Prem) ನಟ ನಾಗಭೂಷಣಗೆ ನಾಯಕಿಯಾಗಿ ಬರುತ್ತಿದ್ದಾರೆ. ಸಾಮಾನ್ಯವಾಗಿ ಮೊದಲ ಚಿತ್ರಕ್ಕೆ ಅವಕಾಶ ಕೊಡುವುದೇ ದೊಡ್ಡ ವಿಚಾರ. ನಟಿಯ ಮೊದಲ ಚಿತ್ರದ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳುವಂತಿದೆ. ಚೊಚ್ಚಲ ಚಿತ್ರಕ್ಕೆ ಅಮೃತಾ ಪ್ರೇಮ್‌ಗೆ 10 ಲಕ್ಷ ರೂ. ಸಂಭಾವನೆ ಕೊಟ್ಟಿದ್ದಾರಂತೆ ಡಾಲಿ. ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ಮರಾಠಿ ಚಿತ್ರದ ಫಸ್ಟ್ ಲುಕ್ ರಿಲೀಸ್
ಡಾಲಿ ನಿರ್ಮಾಣದ ಮೂರನೇ ಸಿನಿಮಾ `ಟಗರುಪಲ್ಯ’ ಚಿತ್ರಕ್ಕೆ ಅಮೃತಾಗೆ 10 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಟನೆಯ ಯಾವುದೇ ಅನುಭವವಿಲ್ಲದ ಹೊಸ ಪ್ರತಿಭೆಗೆ ಇಷ್ಟೊಂದು ಸಂಭಾವನೆನಾ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಇನ್ನೂ ತಮ್ಮ ಚೊಚ್ಚಲ ಚಿತ್ರದ ಮೂಲಕ ಮುಂದಿನ ದಿನಗಳಲ್ಲಿ ಗಟ್ಟಿ ನಾಯಕಿಯಾಗಿ ನಿಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.