Bengaluru CityCinemaKarnatakaLatestMain PostSandalwood

ʻಸಿಂಧೂರ ಲಕ್ಷ್ಮಣʼನಾಗಿ ಬರಲಿದ್ದಾರೆ ನಟ ಧನಂಜಯ

ಸ್ಯಾಂಡಲ್‌ವುಡ್ (Sandalwood) ನಟ ರಾಕ್ಷಸ ಧನಂಜಯ(Dhananjay) ಇದೀಗ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ. ಇತ್ತೀಚೆಗಷ್ಟೇ ರಮ್ಯಾ(Ramya) ಜೊತೆಗಿನ `ಉತ್ತರಕಾಂಡ’ ಚಿತ್ರ ಅನೌನ್ಸ್ ಮಾಡಿದ್ದ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾಗೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಐತಿಹಾಸಿಕ ಪಾತ್ರದಲ್ಲಿ ಮಿಂಚಲು ಡಾಲಿ ರೆಡಿಯಾಗಿದ್ದಾರೆ. ಸಿಂಧೂರ ಲಕ್ಷ್ಮಣನಾಗಿ(Sindhura Lakshmana) ಡಾಲಿ ಬರಲಿದ್ದಾರೆ.

ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್, ಅಷ್ಟು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದೀಗ  `ರಾಬರ್ಟ್‌'(Robert) ಖ್ಯಾತಿಯ ನಿರ್ಮಾಪಕ ಉಮಾಪತಿ(Umapathy) ನಿರ್ಮಾಣದ ಚಿತ್ರಕ್ಕೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೋರಾಟಗಾರ `ವೀರ ಸಿಂಧೂರ ಲಕ್ಷ್ಮಣ’ನಾಗಿ ಬರಲು ಡಾಲಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಸಂಭಾಷಣೆಗಾರ ಪ್ರಶಾಂತ್ ರಾಜಪ್ಪ ಇದೀಗ ರಿಷಿ ಸಿನಿಮಾದ ನಿರ್ದೇಶಕ

`ರಾಬರ್ಟ್’ ನಿರ್ಮಾಪಕ ಉಮಾಪತಿ `ಸಿಂಧೂರ ಲಕ್ಷ್ಮಣʼ ಕಥೆಯನ್ನು ಕನ್ನಡದ ಸೂಪರ್ ಸ್ಟಾರ್ ನಟನಿಗೆ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದರು. ಈಗ ಈ ಪಾತ್ರಕ್ಕೆ ಡಾಲಿನೇ ಸೂಕ್ತ ಎಂದೇನಿಸಿ, ಧನಂಜಯ ಅವರನ್ನ ಈ ಸಿನಿಮಾಗೆ ಕೇಳಲಾಗಿದೆಯಂತೆ. ಕಥೆ ಕೇಳಿ ಡಾಲಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.

ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣ ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ಸಿಂಧೂರ ಲಕ್ಷ್ಮಣ ಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರಿಗೆ ಸಿಂಧೂರ ಲಕ್ಷ್ಮಣ ತಕ್ಕ ಪಾಠ ಕಲಿಸಿದ್ದರು. ಇದೀಗ ಈ ಪಾತ್ರಕ್ಕೆ ಡಾಲಿ ಜೀವ ತುಂಬಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ.

Live Tv

Leave a Reply

Your email address will not be published. Required fields are marked *

Back to top button