ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಷ್ಟುದಿನ ‘ಯಜಮಾನ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗ ಆ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ‘ಒಡೆಯ’ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಟ ದರ್ಶನ್ ಅವರು ಇಂದಿನಿಂದ ‘ಒಡೆಯ’ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಮೊದಲು ದಿನವೇ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿ ಸೆಟ್‍ಗೆ ಒಡೆಯ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದಾರೆ. ದರ್ಶನ್ ಅವರು ಒಡೆಯನ ರಾಯಲ್ ಲುಕ್ ನೋಡಿ ಶೂಟಿಂಗ್‍ಗೆ ಬಂದ ತಕ್ಷಣ ಅಭಿಮಾನಿಗಳು ಮುಗಿಬಿದ್ದಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅಭಿಮಾನಿಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.
‘ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದು, ದರ್ಶನ್ ಮತ್ತು ಶ್ರೀಧರ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಕೊಡಗಿನ ಬೆಡಗಿ ರಾಘವಿ ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಇತ್ತೀಚೆಗಷ್ಟೆ ‘ಯಜಮಾನ’ ಸಿನಿಮಾದ ಹಾಡೊಂದರ ಶೂಟಿಂಗ್ ಗಾಗಿ ಸ್ವೀಡನ್ ಗೆ ಚಿತ್ರತಂಡ ತೆರಳಿತ್ತು. ಈ ಸಿನಿಮಾವನ್ನು ಬಿ. ಸುರೇಶ್ ಮತ್ತು ಅವರ ಪತ್ನಿ ಶೈಲಜಾ ನಾಗ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಯಜಮಾನ ಸಿನಿಮಾದ ಚಿತ್ರೀಕರಣ ಮುಗಿದೆ. ಇಂದು ‘ಒಡೆಯ’ ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv