ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ (Darshan) ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಮುಂದೂಡಿದೆ. ಗುರುವಾರ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ.
ನಟ ದರ್ಶನ್ ಪರ ಇಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿಲ್ಲ. ಅವರು ಗೈರಾದ ಕಾರಣ ನಟನ ಪರ ಸಿದ್ಧಾರ್ಥ್ ದವೆ ವಾದ ಮಂಡಿಸಲಿದ್ದಾರೆ. ಹೀಗಾಗಿ, ಗುರುವಾರಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಜಾಲಿ ಮೂಡಲ್ಲಿರೋ ದರ್ಶನ್ ಬೇಲ್ ಭವಿಷ್ಯ ಇಂದು?
ಕಪಿಲ್ ಸಿಬಲ್ ಗೈರು ಹಿನ್ನೆಲೆ ವಾದ ಮಂಡನೆಗೆ ಕಾಲಾವಕಾಶ ಕೋರಲಾಗಿದೆ. ಲಿಖಿತ ರೂಪದಲ್ಲಿ ದಾಖಲೆ ತಯಾರಿಡಲು ಕೋರ್ಟ್ ಸೂಚನೆ ನೀಡಿದೆ. 75% ಲಿಖಿತ ರೂಪದಲ್ಲಿ ವಾದ ಮಂಡಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಕೆಲ ಕಾಲ ಅಷ್ಟೇ ವಾದ ಮಂಡನೆಗೆ ಅವಕಾಶ ಕೊಡುವುದಾಗಿ ಪೀಠ ಹೇಳಿದೆ.
ಕಳೆದ ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ದರ್ಶನ್ ಕೂಲ್ ಕೂಲ್
ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು, ಹೈಕೋರ್ಟ್ ತನ್ನ ವಿವೇಚನೆ ಚಲಾಯಿಸಿದ ರೀತಿ ತನಗೆ ಮನದಟ್ಟಾಗಿಲ್ಲ ಎಂದು ಹೇಳಿತ್ತು. ಬಳಿಕ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತ್ತು.