ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಗೆ ಇಂದು 66ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಸೋಮವಾರವೇ ಅಂಬರೀಶ್ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ಅವರ ಜೊತೆಗೆನ ಫೋಟೋ ಹಾಕಿ “ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಈ ಶುಭದಿನದಂದು ದೇವರು ಇನ್ನು ಹೆಚ್ಚು ಆರೋಗ್ಯ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಶುಭಕೋರುತ್ತೇನೆ” ಎಂದು ಬರೆದು ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
ಇಂದು ಶುಭಾಶಯ ತಿಳಿಸಿರುವ ದರ್ಶನ್ ಹುಟ್ಟುಹಬ್ಬದ ಮುಂಚಿತವಾಗಿಯೇ ಅಂದರೆ ಸೋಮವಾರ ಅಂಬಿ ಮನೆಗೆ ಭೇಟಿ ನೀಡಿದ್ದರು. ದರ್ಶನ್ ಅಂಬರೀಶ್ ಮನೆಗೆ ಕೇಕ್ ಮತ್ತು ಗಿಫ್ಟ್ ತೆಗೆದುಕೊಂಡು ಹೋಗಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ತೆಗೆದ ಫೋಟೋವನ್ನು ನಟಿ ಸುಮಲತಾ ಅಂಬರೀಶ್ ಅವರು, “ರೆಬಲ್ ಸ್ಟಾರ್ ಗೆ ಮೊದಲು ಕೇಕ್ ಮತ್ತು ಉಡುಗೊರೆ ನೀಡಿ ಮೊದಲ ಶುಭಾಶಯ ತಿಳಿದ ದರ್ಶನ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಪ್ರಿಯಾ ಸುದೀಪ್ ಕೂಡ ಟ್ವಿಟ್ಟರ್ ನಲ್ಲಿ ಅಂಬರೀಶ್ ಗೆ ಶುಭಾಶಯ ತಿಳಿಸಿದ್ದಾರೆ. `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಇಂದು ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಮೇಕಿಂಗ್ ಅನ್ನು ರಿಲೀಸ್ ಮಾಡಿದ್ದು ಇದನ್ನ ಅಂಬಿಗೆ ಡೆಡಿಕೇಟ್ ಮಾಡಿದೆ.
ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಈ ಶುಭದಿನದಂದು ದೇವರು ಇನ್ನು ಹೆಚ್ಚು ಆರೋಗ್ಯ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಶುಭಕೋರುತ್ತೇನೆ ???? @sumalathaA pic.twitter.com/PsZe9le80w
— Darshan Thoogudeepa (@dasadarshan) May 29, 2018
@dasadarshan the 1st bday cake and gifts and wishes in advance for rebel star ????????thank u pic.twitter.com/ukLK17egDM
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) May 28, 2018