ಅಂಬರೀಶ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ದರ್ಶನ್

Public TV
1 Min Read
darshan 6

ರೆಬಲ್ ಸ್ಟಾರ್ ಅಂಬರೀಶ್ (Ambareesh) ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ. ಮೇ 29ರಂದು ಅಂಬರೀಶ್ ಅವರ ಹುಟ್ಟುಹಬ್ಬವಾಗಿದ್ದು, ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ

ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿರವರ ಹುಟ್ಟುಹಬ್ಬದ (Birthday) ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅಂಬರೀಶ್‌ಗೆ ಶುಭಕೋರಿದ್ದಾರೆ ದರ್ಶನ್.

ಅಂದಹಾಗೆ, ಅಂಬರೀಶ್ ಹುಟ್ಟುಹಬ್ಬದಂದು ಅವರ ಸ್ಮಾರಕಕ್ಕೆ ಅಭಿಮಾನಿಗಳು ನಾಳೆ (ಮೇ 29) ಭೇಟಿ ನೀಡಲಿದ್ದಾರೆ. ಅಂಬಿ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಲಿದ್ದಾರೆ. ಅಂಬರೀಶ್‌ ಹುಟ್ಟುಹಬ್ಬದಂದು ( ಮೇ 29) ವಿವಿಧ ಕಾರ್ಯಕ್ರಮಗಳನ್ನಿ ಫ್ಯಾನ್ಸ್‌ ಹಮ್ಮಿಕೊಂಡಿದ್ದಾರೆ.

Share This Article