– ಸಾಮಾನ್ಯ ಭಕ್ತರಂತೆ ಸೇವಾ ಟಿಕೆಟ್ ಪಡೆದು ದೇವರ ದರ್ಶನ
– ಪ್ರಹ್ಲಾದರಾಜರಿಗೆ ಪಾದಪೂಜೆ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ
ರಾಯಚೂರು: ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್‌ಗಾಗಿ (Darshan) ಪತ್ನಿ ವಿಜಯಲಕ್ಷ್ಮಿ, ದೇವರ ಮೊರೆ ಹೋಗಿದ್ದಾರೆ. ಮಂತ್ರಾಲಯ (Mantralayam) ಗುರುರಾಯರ ದರ್ಶನ ಪಡೆದಿದ್ದಾರೆ.
ಗುರುವಾರ ಬೆಳಗ್ಗೆ ಸಾಮಾನ್ಯ ಭಕ್ತರಂತೆ ವಿಜಯಲಕ್ಷ್ಮಿ (Vijayalakshmi) ಅವರು, ರಾಯರ ದರ್ಶನ ಪಡೆದಿರುವ ವೀಡಿಯೋ ವೈರಲ್ ಆಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್ ಮಂತ್ರಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಮೊನ್ನೆ ರಾತ್ರಿಯೇ ಮಂತ್ರಾಲಯಕ್ಕೆ ಬಂದು ತಂಗಿದ್ದರು. ನಿನ್ನೆ ಬೆಳಗ್ಗೆ ರಾಯರು ಹಾಗೂ ಪ್ರಹ್ಲಾದರಾಜರಿಗೆ ಪಾದಪೂಜೆ ಮಾಡಿದ್ದಾರೆ. ಪ್ರಹ್ಲಾದರಾಜರಿಗೆ ಪಾದಪೂಜೆ ಸೇವೆ ಮಾಡಿದರೆ ಒಳಿತಾಗಿತ್ತೆ ಎಂಬ ನಂಬಿಕೆ ಇದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಪಾದಪೂಜೆ ಮಾಡಿದ್ದಾರೆ.
ಪತಿ ದರ್ಶನ್‌ಗೆ ಬಂದೊದಗಿರುವ ಕಷ್ಟಗಳು ದೂರಾಗಲಿ ಎಂದು ರಾಯರಲ್ಲಿ ವಿಜಯಲಕ್ಷ್ಮಿ ಪ್ರಾರ್ಥಿಸಿದ್ದಾರೆ. ಸಾಮಾನ್ಯ ಭಕ್ತರಂತೆ ಸೇವಾ ಟಿಕೆಟ್ ಪಡೆದು ದರ್ಶನ ಪಡೆದಿದ್ದಾರೆ. ಮಠದವರಿಗೂ ಮಾಹಿತಿ ನೀಡದೆ ನಟನ ಪತ್ನಿ ಬಂದು ಹೋಗಿದ್ದಾರೆ. ರಾಯರ ದರ್ಶನ ಪಡೆದು ನಿನ್ನೆ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದರು.