ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 2024ರಲ್ಲಿ ಕಲಿತ ಪಾಠವೇನು ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವರ್ಷ ಎದುರಿಸಿದ ಸಂಕಷ್ಟದ ಬಗ್ಗೆ ಚುಟುಕಾಗಿ ವಿಡಿಯೋ ಮೂಲಕ ಕಲಿತ ಪಾಠವನ್ನು ವಿವರಿಸಿದ್ದಾರೆ. ಇದನ್ನೂ ಓದಿ:ಚಾಮುಂಡಿ ಬೆಟ್ಟಕ್ಕೆ ಭಾವಿ ಪತ್ನಿ ಜೊತೆ ನಟ ಡಾಲಿ ಧನಂಜಯ್ ಭೇಟಿ – ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ
ಈ ವರ್ಷ ಕಲಿತ ಪಾಠದ ಬಗ್ಗೆ ಸಂದೇಶವಿರುವ ಸಣ್ಣ ವಿಡಿಯೋವನ್ನು ಶೇರ್ ಮಾಡಿ, ಬದಲಾವಣೆ ಭಯಾನಕವಾಗಿರತ್ತೆ, ಆದರೆ ಬದಲಾವಣೆಯೇ ಮುಂದೆ ಬೆಳವಣಿಗೆಗೆ ದಾರಿ, ಜೊತೆಗೆ ನೋವು ಜನರನ್ನು ಬದಲಾಯಿಸುತ್ತದೆ. ನಾವು ಒಂದು ಪ್ಲ್ಯಾನ್ ಮಾಡಿದರೆ, ದೇವರ ಪ್ಲ್ಯಾನ್ ಬೇರೆದಾಗಿರುತ್ತದೆ. ಜೀವನವು ನೆನಪುಗಳ ಸಂಗ್ರಹವಲ್ಲದೆ ಬೇರೇನೂ ಅಲ್ಲ. ಕನ್ನಡಿ ನನ್ನ ಉತ್ತಮ ಸ್ನೇಹಿತ ಏಕೆಂದರೆ ನಾನು ಅತ್ತಾಗ, ಅದು ನನ್ನ ನೋಡಿ ಎಂದಿಗೂ ನಗುವುದಿಲ್ಲ. ನೀರು ತುಂಬಾ ಐಷಾರಾಮಿ ಅಲ್ಲ ಆದರೆ ಜೀವನಕ್ಕೆ ತುಂಬ ಮೌಲ್ಯಯುತವಾಗಿದೆ ಎಂದು ವಿಡಿಯೋದಲ್ಲಿದೆ.
View this post on Instagram
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪತಿಗೆ ಜಾಮೀನು ಸಿಕ್ಕ ಹಿನ್ನೆಲೆ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದರು.