ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. ಮುದ್ದಾದ ಬೆಕ್ಕನ್ನು ಎತ್ತಿ ವಿಜಯಲಕ್ಷ್ಮಿ ಮುದ್ದಾಡಿದ್ದಾರೆ. ಕ್ಯೂಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ದರ್ಶನ್ ಪತ್ನಿ ಬೆಡ್‌ರೂಮ್‌ನಲ್ಲಿ ಬೆಕ್ಕಿನ ಜೊತೆ ಪೋಸ್ ಕೊಟ್ಟಿದ್ದಾರೆ. ಮುದ್ದಾದ ಬಿಳಿ ಬಣ್ಣದ ಬೆಕ್ಕನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಮೆರೂನ್ ಕಲರ್ ಡ್ರೆಸ್ ಧರಿಸಿ ಕೂದಲನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಇದನ್ನೂ ಓದಿ:BBK 11: ‘ಕರ್ನಾಟಕವೇ ಮೆಚ್ಚುವಂತೆ ಆಟ ಆಡುತ್ತೀದ್ದೀರಿ’- ಹನುಮಂತನ ಆಟಕ್ಕೆ ಕಿಚ್ಚನ ಮೆಚ್ಚುಗೆ
Advertisement
View this post on Instagram
Advertisement
ಇನ್ನೂ ಬೆಂಗಳೂರಿನ ಕೋರ್ಟ್ ನೀಡಿದ ಅನುಮತಿಯಿಂದಾಗಿ ಈ ಬಾರಿಯೂ ದರ್ಶನ್ ಮಕರ ಸಂಕ್ರಾತಿ ಹಬ್ಬವನ್ನು ಮೈಸೂರಿನಲ್ಲಿ ಆಚರಿಸಲಿದ್ದಾರೆ.
Advertisement
ಪ್ರತಿ ವರ್ಷವೂ ಸಂಕ್ರಾಂತಿಯನ್ನು ದರ್ಶನ್ ಅದ್ಧೂರಿಯಾಗಿ ಆಚರಿಸುತ್ತಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹಸುಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುತ್ತಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಜೊತೆಗೆ ಸಡಗರದಿಂದಲೇ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ. ಅದರಂತೆ ಈ ವರ್ಷವೂ ಕೂಡ ಹಬ್ಬ ಆಚರಿಸಲು ದರ್ಶನ್ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿದ್ದರಿಂದ ಮತ್ತು ಬೆಂಗಳೂರು ಬಿಟ್ಟು ತೆರಳಬಾರದು ಅಂತ ಕೋರ್ಟ್ ಆದೇಶ ಇರುವುದರಿಂದ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಎಲ್ಲಿ ಆಚರಿಸುತ್ತಾರೆ ಎಂಬ ಕುತೂಹಲ ಇತ್ತು. ಬೆಂಗಳೂರು ಕೋರ್ಟ್ ಜನವರಿ 12ರಿಂದ 17ರವೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿರುವುದರಿಂದ ಮೈಸೂರಿನಲ್ಲಿ ನಟ ಹಬ್ಬ ಆಚರಿಸಲಿದ್ದಾರೆ. ಈ ಬಾರಿಯೂ ಹಸು, ಕುದುರೆ, ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಸಿಂಗರಿಸಿ ಕುಟುಂಬದೊಡನೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಿದ್ದಾರೆ.