ಬೆಂಗಳೂರು: ನಟ-ನಟಿಯರು ತಮ್ಮ ಅಭಿಮಾನಿಗಳು ಸಹಾಯ ಕೇಳಿಕೊಂಡು ಬಂದರೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ಬಳಿ ಬಂದರೆ ಪ್ರೀತಿಯಿಂದ ಮಾತನಾಡಿಸಿ ಕಳುಹಿಸುತ್ತಾರೆ.
ನಟ ದರ್ಶನ್ ಸ್ಟಾರ್ ಆದರು ಸರಳತೆಯಿಂದ ಇರುತ್ತಾರೆ. ಯಾರೆ ತಮ್ಮ ಬಳಿ ಬಂದರು ಪ್ರೀತಿಯಿಂದ ಮಾತನಾಡಿಸಿ ಆಟೋಗ್ರಾಫ್ ಕೊಡುತ್ತಾರೆ. ಇದರಿಂದ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುತ್ತದೆ. ಅದೇ ರೀತಿ ತನ್ನ ಬಳಿ ಬಂದ ವಿಕಲಚೇತನ ಅಭಿಮಾನಿಯೊಬ್ಬರಿಗೆ ಊಟ ಮಾಡಿಸಿ ಅವರ ಜೊತೆ ಫೋಟೋ ತೆಗೆಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
ಮತ್ತೋಮ್ಮೆ ಮಾನವೀಯತೆ ಮೆರೆದ ಸರಳತೆಯ ಸಾಮ್ರಾಟ್ ಚಾಲೆಂಜಿಂಗ್ ಸ್ಟಾರ್ ಇಂದು ಚಾಮುಂಡೇಶ್ವರಿ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್ ನಲ್ಲಿ ಪೂಜಾಮಹೋತ್ಸವ ಏರ್ಪಡಿಸಲಾಗಿತ್ತು ಪೂಜಾಮಹೋತ್ಸವಕ್ಕೆ ಅಕಸ್ಮಾತ್ ಅಲ್ಲಿಗೆ ಬಂದ ಅಂಗವಿಕಲ ಅಭಿಮಾನಿಗೆ ಔತಣ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಸ್ ಆಫ಼್ ಸ್ಯಾಂಡಲ್ವುಡ್ ಡಿ ಬಾಸ್ pic.twitter.com/QefAf61qU9
— DBossFansGubbi® (@DBossFansGubbi) August 3, 2018
ಶುಕ್ರವಾರ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವ ಇತ್ತು. ಇದರಿಂದ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್ ಗೆ ಹೋಗಿದ್ದರು. ಅಲ್ಲಿ ಚಾಮುಂಡಿ ತಾಯಿಯ ಪೂಜಾ ಮಹೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಪೂಜಾ ಮಹೋತ್ಸವಕ್ಕೆ ಆಕಸ್ಮಿಕವಾಗಿ ವಿಕಲಚೇತನ ಅಭಿಮಾನಿರೊಬ್ಬರು ಬಂದಿದ್ದರು. ದರ್ಶನ್ ಅವರನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ದರ್ಶನ್ ವಿಕಲಚೇತನ ಅಭಿಮಾನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಅವರ ಅಭಿಮಾನಿಗಳು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ತನ್ನ ನೆಚ್ಚಿನ ನಾಯಕನ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews