ಬೆಂಗಳೂರು: ಜೈಲಿನಲ್ಲಿದ್ದುಕೊಂಡು ನಟ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿರೋ ಫೋಟೋ ಭಾರೀ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ ಮತ್ತೊಂದು ವೀಡಿಯೋ ವೈರಲ್ ಆಗಿದೆ. ನಟ ದರ್ಶನ್‌ನಿಂದ (Darshan) ವೀಡಿಯೊ ಕಾಲ್ ಮಾಡಿರುವ ವೀಡಿಯೋ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ. ಇದರಿಂದ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ʻಡೆವಿಲ್ʼ ದರ್ಶನ್ ಜೈಲಿನಲ್ಲೂ ಬಿಂದಾಸ್ ಲೈಫು – ಕಾಸು ಕೊಟ್ರೆ ಎಲ್ಲವೂ ಖುಲ್ಲಂ ಖುಲ್ಲನಾ..?
ಹೌದು. ಜೈಲಿನಲ್ಲಿರುವ ದರ್ಶನ್ ಮೊಬೈಲ್‌ನಲ್ಲಿ ವೀಡಿಯೋ ಕಾಲ್ (Video Call) ಮೂಲಕ ಆಪ್ತರೊಬ್ಬರ ಜೊತೆ ವೀಡಿಯೊ ಮಾತನಾಡಿದ್ದಾರೆ. ಅತ್ಯಾಪ್ತವಾಗಿ ಮಾತಾಡಿರೊ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಮಾತುಕತೆ ನಡೆಸಿದ್ದಾರೆ. ಒಂದು ವೀಡಿಯೋ ಕಾಲ್‌ನಲ್ಲಿ ಸುಮಾರು 25 ಸೆಕೆಂಡುಗಳ ಕಾಲ ಮಾತನಾಡಿದ್ದಾರೆ. ಈ ವೀಡಿಯೋ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: Exclusive Video | ಸೆಂಟ್ರಲ್ ಜೈಲಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್?
ಜೈಲಿನ ನಿಯಮಾವಳಿಗಳೇನು?
* ಆರೋಪಿಗಳನ್ನು ಭೇಟಿ ಮಾಡಬೇಕಾದರೇ ವಾರದಲ್ಲಿ ಎರಡು ದಿನ ಕುಟುಂಬದವರಿಗೆ ಅವಕಾಶ.
* ಕುಟುಂಬ ಹೊರತುಪಡಿಸಿ ಅಡ್ವೋಕೇಟ್ ಒಬ್ಬರಿಗೆ ಆರೋಪಿಯನ್ನು ಭೇಟಿ ಮಾಡಲು ಅವಕಾಶ.
* ಇದನ್ನ ಹೊರತುಪಡಿಸಿ ಮತ್ತ್ಯಾರಿಗೂ ಭೇಟಿಗೆ ಅವಕಾಶ ಕೊಡುವುದಿಲ್ಲ.
* ಕುಟುಂಬದವರು ಭೇಟಿಯಾಗುವ ವೇಳೆ ಬಟ್ಟೆ ಮತ್ತು ಹಣ್ಣುಗಳನ್ನು ಮಾತ್ರ ಕೊಡಲು ಅವಕಾಶ.
* ಬೇಕರಿ ಐಟಂ ಅಥವಾ ಊಟ ಕೊಡುವುದಕ್ಕೆ ಅವಕಾಶವಿಲ್ಲ.
* ದಿಂಬು ಅಥವಾ ಬೆಡ್ ಶೀಟ್ ಚಾಪೆ ಬೆಡ್ ಇದ್ಯಾವುದಕ್ಕೂ ಅವಕಾಶವಿಲ್ಲ.
* ಸಾಮಾನ್ಯ ಖೈದಿಗಳು ಮತ್ತು ಆರೋಪಿಗಳು ಸಾಮಾನ್ಯವಾಗಿ ಊಟದ ಅಥವಾ ತಿಂಡಿ ಸಮಯದಲ್ಲಿ ಭೇಟಿ ಮಾಡಬಹುದು.
* ವಿಐಪಿ ಆರೋಪಿಗಳು ಬೇರೆ ರೌಡಿಶೀಟರ್‌ಗಳ ಜೊತೆ ಭೇಟಿ ಮಾಡಲು ಅವಕಾಶವಿಲ್ಲ.
* ಅದರಲ್ಲೂ ವಿಶೇಷ ಭದ್ರತಾ ಕೊಠಡಿಯಲ್ಲಿ ಇರಬೇಕಾದರೆ ಅಲ್ಲಿ ಬೇರೆ ಆರೋಪಿಗಳಿಗೆ ಅವಕಾಶ ಇರುವುದಿಲ್ಲ.
* ವಿಐಪಿ ಕೊಠಡಿ ಜೈಲಿನ ಮುಖ್ಯ ದ್ವಾರದ ಬಳಿ ಇರುವುದರಿಂದ ಉಳಿದ ಖೈದಿಗಳು ಭೇಟಿ ಮಾಡಲು ಅವಕಾಶವಿಲ್ಲ.
* ವಿಐಪಿ ಸೆಲ್‌ನಲ್ಲಿರುವ ವಿಐಪಿಗಳನ್ನ ಜೈಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹ ಮಾತನಾಡಲು ಅವಕಾಶವಿಲ್ಲ
* ಸಾಮಾನ್ಯ ಖೈದಿಗಳು ಬ್ಯಾರಕ್ ಇರುವ ಕೊಠಡಿಗಳ ಬಳಿ ಭೇಟಿ ಮಾಡಬಹುದು.
* ಅತಿ ಸೂಕ್ಷ್ಮ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಖೈದಿಗಳನ್ನ ಬೇರೆ ಯಾರು ಭೇಟಿ ಮಾಡೋದಕ್ಕೆ ಅವಕಾಶವಿಲ್ಲ.
* ನ್ಯಾಯಾಲಯದ ಅನುಮತಿ ಇದ್ದರೇ ಮಾತ್ರ ಮನೆ ಊಟ ಅಥವಾ ಬೇರೆ ಆರೋಗ್ಯದ ವಿಚಾರವಾಗಿ ಅವಕಾಶ ಮಾಡಿಕೊಡುತ್ತಾರೆ.
* ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಇಲ್ಲ
* ಜೈಲಿನೊಳಗು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ
* ಟೀ ಕಪ್ ಸಹ ಕೈದಿಗಳಿಗೆ ನೀಡಲ್ಲ, ಮನೆಯವರು ತಂದು ಕೊಡಲು ಅವಕಾಶವಿಲ್ಲ
ಆಂತರಿಕ ತನಿಖೆಗೆ ಆದೇಶ:
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್‌ಗೆ ಸೂಚನೆ ನೀಡಿದ್ದು, ಬಹುತೇಕ ಸೋಮವಾರ ಅಥವಾ ಇವತ್ತು (ಭಾನುವಾರ) ರಾತ್ರಿಯೇ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳ ವಿಚಾರಣೆ, ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ, ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.