ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ

Public TV
1 Min Read
darshan 1

ನಟ ದರ್ಶನ್‌ ಮತ್ತೆ ʻದಿ ಡೆವಿಲ್ʼ (The Devil) ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್ ಮತ್ತೆ ಚಾಲನೆ ನೀಡಲಾಗುತ್ತಿದೆ. ಆದ್ರೆ ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ಇನ್‌ಸ್ಟಾದಿಂದ ದರ್ಶನ್‌ (Darshan) ಕೊಕ್‌ ಕೊಟ್ಟಿದ್ದಾರೆ.

darshan insta

ಹೌದು. ತಮ್ಮ ಇನ್‌ಸ್ಟಾಗ್ರಾಮ್‌ (Instagram) ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ದರ್ಶನ್‌ 6 ಜನರನ್ನ ಫಾಲೋ ಮಾಡ್ತಾ ಇದ್ದರು. ಮದರ್‌ ಇಂಡಿಯಾ ಸುಮಲತಾ ಅಂಬರೀಶ್, ಸಹೋದರ ಸಮಾನರಾದ ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪೆನಿ ಮತ್ತು ಸಹೋದರ ದಿನಕರ್ ಮತ್ತು ಪುತ್ರ ವಿನೀಶ್ ಅವರನ್ನು ಫಾಲೋ ಮಾಡ್ತಿದ್ದರು. ಈಗ ಯಾರನ್ನೂ ದರ್ಶನ್ ಫಾಲೋ ಮಾಡ್ತಿಲ್ಲ. ಫಾಲೋ ಮಾಡುವವರ ಸಂಖ್ಯೆ ʻ0ʼ ಆಗಿದೆ. ಆದ್ರೆ ಇಂಥ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್‌ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ.

darshan

ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

darshan 1

ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಟನ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಲು 1,64,785 ರೂ. ‘ದಿ ಡೆವಿಲ್’ ಚಿತ್ರತಂಡ ಪಾವತಿಸಿದೆ.

Share This Article