ಮೈಸೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ.
ಸಂದೇಶ್ ಸ್ವಾಮಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಸಿನಿಮಾ ನಿರ್ಮಾಪಕ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ. ಹಾಗಾಗಿ ದರ್ಶನ್ ಇಂದು ಮಧ್ಯಾಹ್ನ 3 ರಿಂದ 6 ಗಂಟೆವರೆಗೂ ರ್ಯಾಲಿ ನಡೆಸಲಿದ್ದಾರೆ. ಇದನ್ನೂ ಓದಿ: ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ
ಮೈಸೂರಿನ ಯರಗನಹಳ್ಳಿ ರಾಘವೇಂದ್ರ ಬಡಾವಣೆ, ಕ್ಯಾತಮಾರನಹಳ್ಳಿ ಗಾಂಧಿ ನಗರ, ನರಸಿಂಹರಾಜ ಮೊಹಲ್ಲಾ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ದರ್ಶನ್ ಸಿಎಂ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದ್ದರು.
ನಾಗನಹಳ್ಳಿಯಲ್ಲಿ ದರ್ಶನ್ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈಗ ದರ್ಶನ್ ಸಂದೇಶ್ ಸ್ವಾಮಿ ಪರ ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ಕುತೂಹಲ ಕೆರಳಿಸಿದೆ.