ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅವರು ಇದೀಗ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಲೋಕಸಭೆ ಚುನಾವಣೆಗೆ ಸುಮಲತಾ (Sumalatha) ಪರ ಪ್ರಚಾರ ಮಾಡುವ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯೂ ಕೂಡ ಸುಮಲತಾ ಪರ ಪ್ರಚಾರಕ್ಕೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ
Advertisement
2019ರಲ್ಲಿ ನಡೆದ ಲೋಕಸಭಾ ಎಲೆಕ್ಷನ್‌ನಲ್ಲಿ ಸುಮಲತಾ ಮಂಡ್ಯದಲ್ಲಿ ನಿಂತು ಗೆದ್ದು ಬೀಗಿದ್ದರು. ಯಶ್-ದರ್ಶನ್ ಜೋಡೆತ್ತುಗಳಾಗಿ ಸುಮಲತಾ ಪರ ಪ್ರಚಾರ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಚುನಾವಣೆ ಪ್ರಚಾರದ ಬಗ್ಗೆ ದರ್ಶನ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Advertisement
ಸುಮಲತಾ ಪರ ಪ್ರಚಾರ ಮಾಡ್ತೀರಾ? ಎಂದು ಕೇಳಿದಕ್ಕೆ ದರ್ಶನ್ ಗರಂ ಆಗಿದ್ದಾರೆ. ಬಳಿಕ ಹೆತ್ತ ತಾಯಿನ ಎಂದಾದರೂ ಬಿಟ್ಟು ಕೊಡೋಕೆ ಆಗುತ್ತಾ ಎಂದಿದ್ದಾರೆ. ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದಿದ್ದಾರೆ. ಈಗ ಅವರ ಕೈ ಬಿಟ್ರೆ ಆಗುತ್ತಾ ಎಂದಿದ್ದಾರೆ. ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ ಎಂದು ದರ್ಶನ್ ಮರು ಪ್ರಶ್ನೆ ಕೇಳಿದ್ದಾರೆ. ಸುಮಲತಾ ಅಮ್ಮ ಎಂದಿಗೂ ಅಮ್ಮನೇ ಎಂದು ಮಾತನಾಡಿದ್ದಾರೆ. ಈ ಮೂಲಕ ಅವರ ಪರ ಪ್ರಚಾರ ಮಾಡೋದಾಗಿ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
Advertisement
ದರ್ಶನ್ ಇದೀಗ ಶೂಟಿಂಗ್‌ಗೆ ಬ್ರೇಕ್ ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಚಿಕ್ಕಣ್ಣ, ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದಾರೆ.
ದರ್ಶನ್ ಭೇಟಿ ನೀಡಿದ್ದ ವೇಳೆ, ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದು ಮಾತನಾಡಿದ್ದಾರೆ.