ಬೆಂಗಳೂರು: ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ದರ್ಶನ್ ಇಂದು ನಗರದ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ, ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.
Advertisement
Advertisement
ಇನ್ನೂ ದರ್ಶನ್ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕಾಲೇಜ್‍ನಲ್ಲಿ ದರ್ಶನ್ ಕಟೌಟ್ ಹಾಕಲಾಗಿತ್ತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಟ ದರ್ಶನ್ ನೋಡಿ ಡಿಬಾಸ್ ಡಿಬಾಸ್ ಎಂದು ಕೂಗಿದ್ದಾರೆ. ಆಗ ‘ಏ ಕ್ಯಾಡ್ಬರೀಸ್…ಸ್ಟೂಡೆಂಟ್ಸ್ ನಡೆದಿದ್ದೇ ದಾರಿ’ ಎಂದು ವಿದ್ಯಾರ್ಥಿಗಳಿಗಾಗಿ ದರ್ಶನ್ ಡೈಲಾಗ್ ಹೇಳಿದ್ದಾರೆ.
Advertisement
ವಿದ್ಯಾರ್ಥಿಗಳು ಸನ್ಮಾನ ಮಾಡಲು ಬಂದಾಗ ದರ್ಶನ್ ಮೊದಲು ನಿರಾಕರಿಸಿದ್ದರು. ಕೊನೆಗೆ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಮಣಿದು ನಿಂತುಕೊಂಡೆ ಸನ್ಮಾನ ಸ್ವೀಕರಿಸಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ವಿದ್ಯಾರ್ಥಿಗಳು ಗದೆ ನೀಡಿದ್ದಾರೆ. ಆದರೆ ನಟ ದರ್ಶನ್ ತಮಗೆ ಬಂದ ಗದೆಯನ್ನ ಮತ್ತೆ ಅದೇ ವೇದಿಕೆ ಮೇಲೆ ಎಂಜಿನೀಯರಿಂಗ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ.