Connect with us

Chitradurga

ಎರಡು ದೋಣಿಯಲ್ಲಿ ಕಾಲಿಡಲು ಹೋಗ್ಬೇಡಿ ಚೆನ್ನಾಗಿ ಓದಿ: ದರ್ಶನ್

Published

on

ಚಿತ್ರದುರ್ಗ: ಎರಡು ದೋಣಿಯಲ್ಲಿ ಕಾಲಿಡಲು ಹೋಗಬೇಡಿ ಚೆನ್ನಾಗಿ ಓದಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಇಂದು ಕೋಟೆನಾಡಿನಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸೌಹಾರ್ದಯುತ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರ್ಶನ್ ಮಾತನಾಡಿದರು.

ಇವತ್ತು ನೀವು ಓದಿ ಮುಂದಕ್ಕೆ ಇದಾಗಬೇಕು ಅಂತ ಏನು ಅಂದುಕೊಳ್ಳುತ್ತೀರಾ ಅದರ ಕಡೆ ಗಮನ ಕೊಡಿ. ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿಯನ್ನ ತುಂಬಾ ದೂರ ಇಟ್ಟುಕೊಳ್ಳಬೇಕು ಅಂತ ದೊಡ್ಡವರು ಹೇಳುತ್ತಾರೆ. ದೂರಕ್ಕೆ ಗುರಿಯಿಟ್ಟಾಗಲೇ ನಾವು ಅದನ್ನು ಮುಟ್ಟುವುದಕ್ಕೆ ಪ್ರಯತ್ನ ಪಡುತ್ತೇವೆ. ಇಲ್ಲ ಅಂದರೆ ನಾವು ಇಷ್ಟೇ ಸಾಕು ಅಂದುಕೊಂಡು ಅಷ್ಟರಲ್ಲೇ ಜೀವನ ಮಾಡುತ್ತೇವೆ. ಆದ್ದರಿಂದ ನೀಲ್ಲರೂ ಚೆನ್ನಾಗಿ ಓದಿ ಎಂದು ತಮ್ಮ ಮನದಾಳದ ಮಾತುಗಳನ್ನು ಆಡಿದರು.

ಓದು ಎನ್ನುವುದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ನಿಮ್ಮ ಬಳಿ ಇರುವ ಹಣ, ಆಸ್ತಿ ಏನು ಬೇಕಾದರೂ ಕಸಿದುಕೊಂಡು ಹೋಗಬಹುದು. ಆದರೆ ವಿದ್ಯೆ ಮಾತ್ರ ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನೀವು ಚೆನ್ನಾಗಿ ಓದಿ ಗುರಿ ಸಾಧಿಸಿರಿ. ಮನೆಯಲ್ಲಿ ಹಬ್ಬ ಮಾಡುವುದಕ್ಕಿಂತ ನಾಡ ಹಬ್ಬವನ್ನು ಮಾಡಿ. ಎಲ್ಲರೂ ಒಟ್ಟಾಗಿ ದಸರಾ ಹಬ್ಬ ಮಾಡೋಣ. ಎಲ್ಲರಿಗೂ ಆರೋಗ್ಯ ಆಯಸ್ಸು ಕೊಟ್ಟು ಒಳ್ಳೆಯದು ಮಾಡಲಿ ಎಂದು ದರ್ಶನ್ ಹೇಳಿದರು.

ಇದೇ ವೇಳೆ ನಟ ದೊಡ್ಡಣ್ಣ ಮಾತನಾಡಿ, ಮಾನವನ ಮೊದಲ ಶತ್ರು ಜಾತಿ, ಮಾನವನ ಪರಮ ಶತ್ರು ದುರಹಂಕಾರ, ಇವೆರಡನ್ನು ಬಿಟ್ಟರೆ ಮಾತ್ರ ಕೈ ಹಾಳಾಗಲು ಆಗಲು ಸಾಧ್ಯ. ಈ ಸರಳ ಸಂಸ್ಕೃತಿ ಉತ್ಸವವನ್ನು ಪ್ರಾರಂಭಿಸಲು ನಮಗೆ ಅವಕಾಶ ಮಾಡಿಕೊಟ್ಟ ಶಿವಮೂರ್ತಿ ಶರಣರಿಗೆ ನನ್ನ ದೊಡ್ಡ ನಮಸ್ಕಾರ. ನಾವು ಇಂದು ಎರಡಕ್ಷರ ಕಲಿತ್ತಿದ್ದೇವೆ ಅಂದರೆ ಅದು ಅದು ಡಾ. ರಾಜ್ ಕುಮಾರ್ ಅವರಿಂದ ಎಂದು ಅಣ್ಣವ್ರನ್ನು ನೆನಪಿಸಿಕೊಂಡರು.

ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗದ ಮುರುಘಾಮಠ. ಇಲ್ಲಿ ಪ್ರತಿವರ್ಷ ನಡೆಯುವ ದಸರಾ ಉತ್ಸವ ಎಲ್ಲರ ಕಣ್ಮನ ಸೆಳೆಯುತ್ತದೆ. ಸೌಹಾರ್ದಯುತ ನಡಿಗೆ ಕಾರ್ಯಕ್ರಮದಲ್ಲಿ ದರ್ಶನ್ ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟರಾದ ಶ್ರೀನಿವಾಸಮೂರ್ತಿ, ದೊಡ್ಡಣ್ಣ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಾಥ್ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *