-ಅಂದೇ ಎ-1 ಆರೋಪಿ ಪವಿತ್ರಾ ಬೇಲ್ ಭವಿಷ್ಯ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಗಳಾದ ದರ್ಶನ್ (Actor Darshan) ಸೇರಿದಂತೆ ಐವರು ಆರೋಪಿಗಳ ಜೈಲು ಸ್ಥಳಾಂತರ ಕೋರಿರುವ ಅರ್ಜಿ ವಿಚಾರಣೆಯನ್ನು ಸಿಸಿಎಚ್ 57ನೇ ಕೋರ್ಟ್ ಸೆ.2ಕ್ಕೆ ಮುಂದೂಡಿದೆ.
ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ವಿಚಾರವಾಗಿ ದರ್ಶನ್, ಲಕ್ಷಣ್, ನಾಗರಾಜ್ ಹಾಗೂ ಪ್ರದೂಷ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್
ನಟ ದರ್ಶನ್ ಪರ ವಕೀಲರು, ಪ್ರಕರಣದ ಟ್ರಯಲ್ ಅತೀ ಶೀಘ್ರದಲ್ಲಿ ಪ್ರಾರಂಭವಾಗುತ್ತಿದೆ. ಅಲ್ಲದೇ ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ವಕೀಲರ ಭೇಟಿ ಅಸಾಧ್ಯ. ಪ್ರತಿ ಬಾರಿ ವಿಚಾರಣೆಗೆ ಹಾಜರುಪಡಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿ ಜೈಲಿಗೆ ಹೋಗಿ ಮಗನನ್ನು ನೋಡಲು ಅವರಿಗೆ ಕಷ್ಟವಾಗುತ್ತದೆ ಎಂದಿದ್ದಾರೆ. ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಯಾವುದೇ ಅವಕಾಶ ನೀಡುತ್ತಿಲ್ಲ, ಚಳಿಗಾಲವಿದೆ ಹೀಗಾಗಿ ದಿಂಬು, ಬ್ಲ್ಯಾಂಕೇಟ್ ನೀಡಲು ಅವಕಾಶ ಕೊಡಿ. ಜೊತೆಗೆ ಹೆಚ್ಚುವರಿ ಬಟ್ಟೆ, ನೈಟ್ ಡ್ರೆಸ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಸಿಸಿಎಚ್ 57ನೇ ಕೋರ್ಟ್‌ನಲ್ಲಿ ನಟ ದರ್ಶನ್ ಸೇರಿ ಇತರರನ್ನು ಬೇರೆ ಜೈಲಿಗೆ ಸ್ಥಳಾಂತರ ಅರ್ಜಿ ಹಾಗೂ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯನ್ನು ಸೆ.2ಕ್ಕೆ ಮುಂದೂಡಿದ್ದಾರೆ.
ಇನ್ನೂ ಸಿಸಿಎಚ್ 64ನೇ ಕೋರ್ಟ್‌ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾರೆ.
ಸದ್ಯ ನ್ಯಾಯಾಲಯ ಪವಿತ್ರಗೌಡ ಜಾಮೀನು ಅರ್ಜಿ ತೀರ್ಪನ್ನು ಸೆ.2ಕ್ಕೆ ಪ್ರಕಟಿಸಲಿದೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ