ಬೆಂಗಳೂರು: ಹಣ, ಹೆಸರು, ಶ್ರೀಮಂತಿಕೆ ಎಲ್ಲಾ ಬಂದ ಮೇಲೆ ಏನು ಬೇಕೋ ಸಿಗಬಹುದು. ಅವು ಹೆಚ್ಚು ದಿನ ಸ್ಮೃತಿ ಪಟಲದಲ್ಲಿ ಉಳಿಯಲು ಸಾಧ್ಯವಿಲ್ಲ. ಆದರೆ ಏನೇನೂ ಇಲ್ಲದಿದ್ದಾಗಿನ ನೆನಪುಗಳು ಯಾವತ್ತಿಗೂ ಮರೆಯಲು ಕೂಡಾ ಸಾಧ್ಯವಿಲ್ಲ.
Advertisement
ಅದು ದರ್ಶನ್ ಅವರ ಮೊದಲ ಸಿನಿಮಾ. `ಮೆಜೆಸ್ಟಿಕ್’ ಹೆಸರಿನ ಸಿನಿಮಾ ಶುರು ಮಾಡಿದಾಗ ದರ್ಶನ್ ಅವರ ಬಳಿ ಓಡಾಟಕ್ಕೆ ಸ್ವಂತಕ್ಕೊಂದು ಕಾರು ಸಹಾ ಇರಲಿಲ್ಲ. ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರ ಬಳಿ ಮಾರುತಿ 800 ಕಾರ್ ಇತ್ತು. ದರ್ಶನ್ ಶೂಟಿಂಗ್ ಗೆಂದು ಬೆಂಗಳೂರಿಗೆ ಬಂದಾಗ ಅನೇಕ ಸಲ ಇದೇ ಕಾರನ್ನೇ ಓಡಾಟಕ್ಕೆ ಬಳಸುತ್ತಿದ್ದರು. ಮಾರುತಿ 800 ಕಾರಲ್ಲಿ ಓಡಾಡುವುದೇ ಆಗಿನ ಕಾಲಕ್ಕೆ ದರ್ಶನ್ ರಂಥ ಹೊಸಾ ಹೀರೋಗೆ ಖುಷಿಯ ವಿಚಾರವಾಗಿತ್ತು. ಇವತ್ತು ದರ್ಶನ್ ಮನೆಯಲ್ಲಿ ಇಂಟರ್ ನ್ಯಾಷನಲ್ ಕಂಪೆನಿಯ ಕಾರುಗಳು ನಿಂತಿವೆ. ಇತ್ತೀಚೆಗೆ ತಾನೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನು ಸಹ ದರ್ಶನ್ ಖರೀದಿಸಿದ್ದಾರೆ.
Advertisement
Advertisement
ಇದೆಲ್ಲದರ ನಡುವೆ ಇತ್ತೀಚೆಗ ನೆಲಮಂಗಲದ ರೆಸಾರ್ಟ್ ವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ 16 ವರ್ಷ ಕಳೆದ ನೆನಪಿಗೆ ನಿರ್ಮಾಪಕ ರಾಮಮೂರ್ತಿ ಸಣ್ಣದೊಂದು ಸಮಾರಂಭ ಆಯೋಜಿಸಿದ್ದರು. ಮೆಜೆಸ್ಟಿಕ್ ಸಿನಿಮಾಗಾಗಿ ದುಡಿದ ತಂತ್ರಜ್ಞರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಅವರು ಮೆಜೆಸ್ಟಿಕ್ ಸಂದರ್ಭದಲ್ಲಿ ತಾವು ಓಡಾಡುತ್ತಿದ್ದ ಮಾರುತಿ ಕಾರಿನ 3483 ನಂಬರ್ ಸಮೇತ ನೆನಪು ಮಾಡಿಕೊಂಡರು. ಈ ಕಾರು ಕೊಟ್ಟರೆ ನಾನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಬಯಕೆ ವ್ಯಕ್ತಪಡಿಸಿದರು. ಕೂಡಲೇ ನಿರ್ಮಾಪಕ ರಾಮಮೂರ್ತಿ ಮಾರು 800 ಕಾರಿನ ಕೀ ಸಮೇತ ಕಾರನ್ನು ದರ್ಶನ್ ಅವರಿಗೆ ನೀಡಿದರು. ತಕ್ಷಣ ಆ ಕಾರಲ್ಲಿ ಕೂತು ಒಂದು ರೌಂಡು ಹಾಕಿಕೊಂಡು ಬಂದ ದರ್ಶನ್ ಅವರ ಮುಖದಲ್ಲಿ ಕಂಡ ಸಂತಸ ನಿಜಕ್ಕೂ ದೊಡ್ಡದು. ಅದು ಯಾವ ಮಟ್ಟಿಗೆಂದರೆ, ಅವರು ಲ್ಯಾಂಬೋರ್ಗಿನಿಯಲ್ಲಿ ಕೂತು ಡ್ರೈವ್ ಮಾಡಿದ್ದಕ್ಕಿಂತಾ ಹೆಚ್ಚು!