ಒಬ್ಬ ಅಭಿಮಾನಿಯಾಗಿ ಅಮಿತಾಭ್‌ರನ್ನು ನಾನು ಮೀಟ್ ಮಾಡಬೇಕು- ದರ್ಶನ್ ಹೇಳಿಕೆ ವೈರಲ್

Public TV
1 Min Read
Darshan 9

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Darshan) ಬಹುದೊಡ್ಡ ಅಭಿಮಾನಿಗಳ ಬಳಗವೇ ಇದೆ. ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎಂದು ಡಿಬಾಸ್ ಕರೆಯುತ್ತಾರೆ. ತಾವು ಒಬ್ಬ ಸ್ಟಾರ್ ನಟನಾಗಿದ್ದು, ತಮ್ಮ ಇಷ್ಟದ ಸ್ಟಾರ್ ನಟನ ಬಗ್ಗೆ ಮಾತನಾಡಿರೋದು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ಹೇಳಿಕೆ ಈಗ ವೈರಲ್‌ ಆಗಿದೆ. ಇದನ್ನೂ ಓದಿ:‘ಸಿಖಂದರ್‌’ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿ

darshan 3

ಈ ಹಿಂದೆ ಸಂದರ್ಶನವೊಂದರಲ್ಲಿ ದರ್ಶನ್ ಅವರು ಅಮಿತಾಭ್ ಬಚ್ಚನ್ (Amitabh Bachchan) ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದರು. ದರ್ಶನ್ ಕನ್ನಡದ ಸ್ಟಾರ್ ಹೀರೋ. ಅವರಿಗೆ ಅಮಿತಾಭ್‌ರನ್ನು ಭೇಟಿ ಮಾಡಬೇಕು ಎಂದರೆ ಅದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಆದರೆ, ನಮ್ಮ ಭೇಟಿ ಆ ರೀತಿ ಇರಬಾರದು ಅನ್ನೋದು ದರ್ಶನ್ ಆಸೆ ಆಗಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಐಶ್ವರ್ಯಾ ರೈ

ಅಮಿತಾಭ್ ಬಚ್ಚನ್‌ನ ಮೀಟ್ ಮಾಡಬೇಕು ಎನ್ನುವ ಆಸೆ ಇದೆ. ಹೀರೋ ಆಗಿ ಅವರನ್ನು ಭೇಟಿ ಮಾಡಬಾರದು. ಫ್ಯಾನ್ ಆಗಿ ಅವರನ್ನು ಭೇಟಿ ಮಾಡಬೇಕು ಎಂದಿದ್ದಾರೆ. ಮುಂಬೈನಲ್ಲಿ ಸಾಕಷ್ಟು ಫ್ರೆಂಡ್ಸ್ ಇದ್ದಾರೆ. ಬಾರಣ್ಣ ಕರೆದುಕೊಂಡು ಹೋಗ್ತೀನಿ ಎನ್ನುತ್ತಾರೆ. ಸೌತ್ ಇಂಡಿಯಾದ ಹೀರೋ ಎಂದು ಹೇಳಿದಾಗ ಅವರು ವೆಲ್‌ಕಮ್ ಮಾಡಿಯೇ ಮಾಡುತ್ತಾರೆ. ಜನರ ಮಧ್ಯೆ ನಿಂತು ಅವರನ್ನು ನೋಡಬೇಕು ಎಂದು ದರ್ಶನ್ ಹೇಳಿದ್ದಾರೆ. ತಾವು ಕೂಡ ಜನಸಾಮಾನ್ಯರಂತೆ ಭೇಟಿಯಾಗಬೇಕು ಎಂದಿದ್ದಾರೆ.

‘ಕಾಟೇರ’ ಸಿನಿಮಾದಿಂದ ದರ್ಶನ್‌ಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದೆ. ಸದ್ಯ ‘ಡೆವಿಲ್’ ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಇತ್ತೀಚೆಗೆ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್ ಕೈಗೆ ಪೆಟ್ಟಾಗಿತ್ತು. ಅವರಿಗೆ ಸರ್ಜರಿ ಕೂಡ ಮಾಡಲಾಗಿತ್ತು. ಈಗ ದರ್ಶನ್ ಗುಣಮುಖರಾಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.

Share This Article